ಗೋರಖ್‍ಪುರ್‍ದ ಬಿಆರ್‍ಡಿ ಆಸ್ಪತ್ರೆಯಲ್ಲಿ 6 ವರ್ಷದಲ್ಲಿ 3,000ಕ್ಕೂ ಹೆಚ್ಚು ಮಕ್ಕಳ ಬಲಿ ..!

ಈ ಸುದ್ದಿಯನ್ನು ಶೇರ್ ಮಾಡಿ

Hospitala--01

ಗೋರಖ್‍ಪುರ್, ಅ.12-ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಕ್ಷೇತ್ರ ಗೋರಖ್‍ಪುರ್‍ದಲ್ಲಿರುವ ಹಾಗೂ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 63ಕ್ಕೇರಿ ಅತಂಕ ಸೃಷ್ಟಿಯಾಗಿರುವಾಗಲೇ ಕರ್ಮಕಾಂಡಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.  ಬಿಆರ್‍ಡಿ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಲ್ಲಿ 3,000ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿರುವ ವಿಚಾರ ಬಯಲಾಗಿದೆ.

ಈ ಕಾಲೇಜಿನಲ್ಲಿ 2012ರಲ್ಲಿ 557, ನಂತರದ ವರ್ಷಗಳಲ್ಲಿ ಅನುಕ್ರಮವಾಗಿ 650, 535, 491, 641 ಹಾಗೂ ಈ ವರ್ಷದಲ್ಲಿ ಇಲ್ಲಿಯವರೆಗೆ 163 ಮಕ್ಕಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ದಾಖಲೆಗಳಿಂದ ತಿಳಿದುಬಂದಿದೆ.  ಸತ್ಯಾರ್ಥಿ ಆಕ್ರೋಶ : ಗೋರಖ್‍ಪುರ್‍ನ ಬಿಆರ್‍ಡಿ ಮೆಡಿಕಲ್ ಕಾಲೇಜಿನಲ್ಲಿ 63 ಮಕ್ಕಳು ಸಾವಿಗೀಡಾಗಿರುವ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನೊಬೆಲ್ ಪ್ರಶಸ್ತಿ ಪುರಸ್ಕøತ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ. ಇದು ಕೇವಲ ದುರಂತವಲ್ಲ, ಬದಲಿಗೆ ಹತ್ಯಾಕಾಂಡ ಎಂದು ಖಂಡಿಸಿದ್ದಾರೆ.

ಟ್ವೀಟರ್‍ನಲ್ಲಿ ಉತ್ತರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 70ನೇ ವರ್ಷದ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಸರ್ಕಾರವು ಮಕ್ಕಳಿಗೆ ನೀಡಿರುವ ಸ್ವಾತಂತ್ರ್ಯ ಇದಾಗಿದೆ ಎಂದು ನೊಂದು ನುಡಿದಿದ್ದಾರೆ.

Facebook Comments

Sri Raghav

Admin