ನಿದ್ರಿಸುತ್ತಿದ್ದ ಇಬ್ಬರು ಸೋದರಿಯರಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Fire-Girl-Suicide

ಬರೇಲಿ, ಆ.12-ಅಪರಿಚಿತ ದುಷ್ಕರ್ಮಿಗಳು ನಿದ್ರೆಯಲ್ಲಿದ್ದ ಇಬ್ಬರು ಸಹೋದರಿಯರಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬ್‍ಗಂಜ್‍ನಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಮನೆಗೆ ನುಗ್ಗಿದ ಗೂಂಡಾಗಳು ನಿದ್ರಿಸುತ್ತಿದ್ದ ಇಬ್ಬರು ಸಹೋದರಿಯರ ಹಾಸಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಅಗ್ನಿಗೆ ಸಿಲುಕಿ ನರಳುತ್ತಿದ್ದ ಅವರಿಬ್ಬರನ್ನು ಕುಟುಂಬದ ಸದಸ್ಯರು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಿದರು. 18 ವರ್ಷದ ಗುಲ್ಷಾನಾ ಸ್ಥಿತಿ ಗಂಭೀರವಾಗಿದ್ದು, ಆಕೆಯ ತಂಗಿ 17 ವರ್ಷದ ಫಿಜಾಳಿಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿವೆ. ತಮಗೆ ಯಾರೊಂದಿಗೂ ವೈರತ್ವ ಇಲ್ಲ.

ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಸಹೋದರಿಯರ ತಾಯಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin