ಶೂಟಿಂಗ್‍ ವೇಳೆ ಅಮಿತಾಬ್ ಬಚ್ಚನ್‍ಗೆ ಮೂಳೆ ಮುರಿತ

Amitab

ಮುಂಬೈ, ಆ.12-ಬಹುನಿರೀಕ್ಷಿತ ಥಗ್ಸ ಆಫ್ ಹಿಂದೂಸ್ತಾನ್ ಸಿನಿಮಾ ಚಿತ್ರೀಕರಣದ ವೇಳೆ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್‍ಗೆ ಗಾಯಗಳಾಗಿದ್ದು, ಪಕ್ಕೆಲುಬುಗಳ ಮೂಳೆಯೊಂದು ಮುರಿದಿದೆ. ಶೂಟಿಂಗ್ ವೇಳೆ ಕೆಳಕ್ಕೆ ಬಿದ್ದ ಕಾರಣ ಬಚ್ಚನ್ ಎದೆಭಾಗಕ್ಕೆ ಪೆಟ್ಟಾಗಿತ್ತು. ಆದರೆ, ಅವರು ಇದನ್ನು ನಿರ್ಲಕ್ಷಿಸಿದ್ದರು.
ಶೂಟಿಂಗ್ ಬಳಿಕ ಮುಂಬೈಗೆ ಹಿಂದಿರುಗಿದ ಬಚ್ಚನ್ ಪಕ್ಕೆಲುಬಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ವೈದ್ಯರನ್ನು ಸಂಪರ್ಕಿಸಿದಾಗ ಮೂಳೆಯಲ್ಲಿ ಬಿರುಕು ಬಿಟ್ಟಿರುವುದು ಎಂಆರ್‍ಐ ಸ್ಕ್ಯಾನಿಂಗ್‍ನಲ್ಲಿ ಪತ್ತೆಯಾಗಿದೆ. ಇಷ್ಟಾದರೂ ಕೂಡ ಬಿಗ್‍ಬಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡು ತಮ್ಮ ಬದ್ಧತೆಯಿಂದ ಎಲ್ಲರನ್ನು ಚಕಿತಗೊಳಿಸಿದರು.

ಅಮೀರ್‍ಖಾನ್ ಮತ್ತು ಬಚ್ಚನ್ ನಡೆಸುತ್ತಿರುವ ಸ್ವಾತಂತ್ರ ಪೂರ್ವ ಕಥೆಯನ್ನು ಹೊಂದಿರುವ ಥಗ್ಸ್ ಆಫ್ ಹಿಂದೂಸ್ತಾನ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin