ಸರ್ವಾಧಿಕಾರಿ ಕಿಮ್ ಖಂಡಿತ ದೊಡ್ಡ ಬೆಲೆ ತೆತ್ತು ವಿಷಾದಿಸಬೇಕಾಗುತ್ತದೆ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump-North-korea

ವಾಷಿಂಗ್ಟನ್, ಆ.12-ಕ್ಷಿಪಣಿ ದಾಳಿ ನಡೆಸುವುದಾಗಿ ಬೆದರಿಕೆಗಳನ್ನು ಹಾಕುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಯಾವುದೇ ಪ್ರಾಂತ್ಯ ಅಥವಾ ಅದರ ಮಿತ್ರಪಕ್ಷಗಳಿಗೆ ಸೇರಿದ ಪ್ರದೇಶಗಳ ಮೇಲೆ ಯಾವುದೇ ಹಗೆತನದ ಕೃತ್ಯಗಳನ್ನು ಎಸಗಿದಲ್ಲಿ ಅದಕ್ಕೆ ಕಿಮ್ ದೊಡ್ಡ ಬೆಲೆ ತೆತ್ತು ವಿಷಾದಿಸಬೇಕಾಗುತ್ತದೆ ಎಂದೂ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಕಿಮ್ ಬೆದರಿಕೆಗಳನ್ನು ಒಡ್ಡುತ್ತಲೇ ಇದ್ದರೆ ಅವರ ವಿರುದ್ಧ ಅಮೆರಿಕ ಅತ್ಯುಗ್ರ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Facebook Comments

Sri Raghav

Admin