ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಕೆಂಡಕಾರಿದ ಜನಾರ್ದನ ಪೂಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Janardhan-Poojary--Siddaram

ಮಂಗಳೂರು, ಆ.12-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‍ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರೆ, ನಿಮ್ಮನ್ನು ಕೆಳಗಿಳಿಸಲಿದ್ದಾರೆ. ಸಂಜೆಯೊಳಗೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರೆ. ಅವರು ಬಂದಿರೋದು ನಿಮ್ಮನ್ನ ಕೆಳಗಿಳಿಸೋಕೆ. ಈ ಹಿಂದೆ ಅಮಿತ್ ಷಾ ಭೇಟಿ ನೀಡಿರುವ 18 ರಾಜ್ಯಗಳಲ್ಲೂ ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದ್ದಾರೆ. ನಿಮ್ಮನ್ನೂ ಕೆಳಗಿಳಿಸಲಿದ್ದಾರೆ. ಸಂಜೆಯೊಳಗೆ ರಾಜೀನಾಮೆ ನೀಡಿ ಎಂದಿದ್ದಾರೆ.

ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ ಮುಖ್ಯಮಂತ್ರಿಗಳಿಗೆ ಮಾತ್ರ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಮಯವೇ ಇಲ್ಲ. ಹಗಲಿನಲ್ಲಿ ನಿಮಗೆ ಸಮಯವಿರುವುದಿಲ್ಲ. ಆದರೆ ರಾತ್ರಿ ನಿಮಗೇನು ಕೆಲಸ, ಇಲ್ಲ ನಿಮಗೇನಾದರೂ ಬೇರೆ ಅಭ್ಯಾಸವಿದೆಯೇ? ರಾಜ್ಯಭಾರ ಮಾಡಲು ಆಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಜನತೆ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ನಿಮಗೂ ಕಾಲ ಸಮೀಪಿಸುತ್ತಿದೆ. ಈಗಲಾದರೂ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ. ಡಿ.ಕೆ.ಶಿವಕುಮಾರ್ ಪ್ರಬಲರಾಗುತ್ತಿದ್ದಾರೆ. ನೀವು ಎಚ್ಚೆತ್ತುಕೊಳ್ಳದಿದ್ದರೆ ಬಹಳ ಕಷ್ಟವಿದೆ ಎಂದು ಹರಿಹಾಯ್ದಿದ್ದಾರೆ.  ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯನ್ನು ಹೈಕಮಾಂಡ್ ನೇಮಿಸಲಿ ಎಂದು ಆಗ್ರಹಿಸಿದ್ದಾರೆ.

Facebook Comments

Sri Raghav

Admin