ಸೈನೈಡ್ ಗುಡ್ಡದಲ್ಲಿ ಸಾವಿರಾರು ಗಿಡ ನೆಟ್ಟ ವಿದ್ಯಾರ್ಥಿಗಳು

KGF-014

ಕೆಜಿಎಫ್, ಆ.12- ನಗರದಲ್ಲಿ ಪರಿಸರ ಹಾನಿ ಉಂಟು ಮಾಡುತ್ತಿರುವ ಸೈನೈಡ್ ಗುಡ್ಡದ ಮೇಲೆ ನೂರಾರು ವಿದ್ಯಾರ್ಥಿಗಳು ಮತ್ತು ವಕೀಲರು ಸಾಮೂಹಿಕವಾಗಿ ಗಿಡ ನೆಟ್ಟರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಂ.ಜಗದೀಶ್ವರ, ದಯಾನಂದ, ರೂಪ, ರವಿಕುಮಾರ್, ಲೋಕೇಶ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಕಳೆದ ಎರಡು ದಿನಗಳಿಂದ ನಗರದಲ್ಲಿ ಬಿದ್ದಿದ್ದ ಮಳೆ ಗುಡ್ಡದ ಮೇಲೆ ಅರಣ್ಯ ಇಲಾಖೆ ತೋಡಿದ್ದ ಗುಂಡಿಗಳಲ್ಲಿ ಸಸಿಗಳನ್ನು ನೆಡಲಾಯಿತು. ಗಿಡ ನೆಡುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು.

ಸೈನೈಡ್ ಗುಡ್ಡದ ಮೇಲೆ ವೃಕ್ಷಾಂದೋಲನ ಮಾಡಿದರೆ, ಮುಂದಿನ ದಿನಗಳಲ್ಲಿ ನಗರವನ್ನು ಧೂಳು ಮುಕ್ತ ಪ್ರದೇಶವನ್ನಾಗಿ ಮಾಡಬಹುದು ಎಂದು ನ್ಯಾಯಾಧೀಶ ಎಂ.ಜಗದೀಶ್ವರ ಹೇಳಿದರು.

Facebook Comments

Sri Raghav

Admin