ಹೈಕಮಾಂಡ್ ಹೇಳಿದವರಿಗೆ ಮಾತ್ರ ಬಿಜೆಪಿ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

Amit-Shah-01

ಬೆಂಗಳೂರು, ಆ.12- ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್‍ನ ವಿಚಾರದಲ್ಲಿ ವರಿಷ್ಠರ ಅನುಮತಿಯಿಲ್ಲದೇ ಯಾರಿಗೂ ಆಶ್ವಾಸನೆ ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಅಮಿತ್ ಶಾ, ರಾಜ್ಯ ಬಿಜೆಪಿ ಮುಖಂಡರಿಗೆ ರವಾನಿಸಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮುಖಂಡರ ಅನುಭವದ ಲಾಭವನ್ನು ಪಡೆದುಕೊಳ್ಳಲು ಅಮಿತ್ ಶಾ ನಿರ್ಧರಿಸಿದ್ದು, ಹಾಗಾಗಿ ಅವರೊಂದಿಗೆ ಆಗಸ್ಟ್ ಹದಿನಾಲ್ಕರಂದು ಪ್ರತ್ಯೇಕ ಸಭೆ ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 150 ಜನ ಭಾಗವಹಿಸಲಿದ್ದಾರೆ.

ಇತ್ತೀಚೆಗೆ ಪಕ್ಷಕ್ಕೆ ಸೇರಿದ ಮುಖಂಡರ ಪೈಕಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಉಡುಪಿ – ಚಿಕ್ಕಮಗಳೂರು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕುಮಾರ್ ಬಂಗಾರಪ್ಪ, ಕೆ.ಪಿ.ನಂಜುಂಡಿ ಸೇರಿದಂತೆ ಸಭೆಯಲ್ಲಿ ಭಾಗವಹಿಸುವ ಎಲ್ಲಾ ಪ್ರಮುಖರ ಪಟ್ಟಿಯನ್ನು ಅಮಿತ್ ಶಾ ಈಗಾಗಲೇ ತರಿಸಿಕೊಂಡಿದ್ದಾರೆ.
ಆಯಾಯ ಕ್ಷೇತ್ರದಲ್ಲಿ ನಡೆಸಲಾಗುವ ಸಮೀಕ್ಷೆ ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಅಮಿತï ಶಾ ಹೇಳುವ ಮೂಲಕ, ಟಿಕೆಟ್ ಹಂಚಿಕೆ ವರಿಷ್ಠರ ಅಣತಿಯಂತೇ ಸಾಗಲಿದೆ ಎನ್ನುವ ಸೂಚನೆಯನ್ನು ರಾಜ್ಯ ಮುಖಂಡರಿಗೆ ಶಾ ನೀಡಿದ್ದಾರೆ. ಮುಂದೆ ಓದಿ.

ಸಮೀಕ್ಷೆಯನ್ನು ಆಧರಿಸಿ ಟಿಕೆಟ್:

ಆಯಾಯ ಕ್ಷೇತ್ರದಲ್ಲಿ ಯಾವ ರೀತಿ ರಣತಂತ್ರ ರೂಪಿಸಬೇಕು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಿ, ಪಕ್ಷದ ಟಿಕೆಟ್ ಸಮೀಕ್ಷೆಯನ್ನು ಆಧರಿಸಿ ನೀಡಲಾಗುವುದು. ಮುಂಬರುವ ಚುನಾವಣೆಯಲ್ಲಿ ಯಾವ ಪ್ರಮುಖ ವಿಷಯವನ್ನು ಮುಂದಿಟ್ಟುಕೊಂಡು ಎದುರಿಸಬೇಕು ಎನ್ನುವುದರ ಬಗ್ಗೆ ರಾಜ್ಯ ಭೇಟಿಯ ವೇಳೆ ಚರ್ಚಿಸೋಣ ಎಂದು ಅಮಿತï ಶಾ ರಾಜ್ಯ ಮುಖಂಡರಿಗೆ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಹಿರಿಯ ಮುಖಂಡ ಈಶ್ವರಪ್ಪ ಮತ್ತು ಬಿ.ಎಲï.ಸಂತೋಷ್ ಈಗಾಗಲೇ ಹಲವು ಮುಖಂಡರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ವರಿಷ್ಠರಿಗೆ ಲಭ್ಯವಾಗಿರುವ ಹಿನ್ನಲೆಯಲ್ಲಿ, ಅಮಿತ್ ಶಾ ಈ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಭಿನ್ನಮತವನ್ನು ಸಹಿಸಿಕೊಳ್ಳುವುದಿಲ್ಲ:

ಸಿದ್ದರಾಮಯ್ಯ ಸರಕಾರದ ವೈಫಲ್ಯದ ಬಗ್ಗೆ ರಾಜ್ಯ ಭೇಟಿಯ ವೇಳೆ ಚರ್ಚಿಸೋಣ, ಚುನಾವಣಾ ಈ ವರ್ಷದಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಮತವನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ರಾಜ್ಯದ ಇಬ್ಬರು ಹಿರಿಯ ಮುಖಂಡರಿಗೆ ಅಮಿತ್ ಶಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು, ತಮ್ಮ ಆಪ್ತರಿಗೆ, ಕುಟುಂಬದವರಿಗೆ ಟಿಕೆಟï ನೀಡುತ್ತೇವೆ ಎಂದು ಆಶ್ವಾಸನೆ ನೀಡಬೇಡಿ. ಸಮೀಕ್ಷೆ ಮತ್ತು ಕಾರ್ಯಕರ್ತರ ಅಭಿಪ್ರಾಯ ಅವರ ಪರವಾಗಿದ್ದರೆ, ಟಿಕೆಟ್ ನೀಡೋಣ, ಇಲ್ಲದಿದ್ದರೆ ಯಾವ ಕಾರಣಕ್ಕೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಅಮಿತï ಶಾ ಹೇಳಿದ್ದಾರೆ ಎನ್ನುವ ಮಾಹಿತಿಯಿದೆ.

ಟಿಕೆಟ್ ಆಶ್ವಾಸನೆ ದೊರತ ಆಕಾಂಕ್ಷಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ ಎನ್ನುವ ಮಾಹಿತಿಯಿದೆ. ಹೊಸದಾಗಿ ಸೇರ್ಪಡೆಗೊಂಡವರೂ ಸೇರಿ, ಪಕ್ಷದ ಟಿಕೆಟಿಗಾಗಿ ಬಿಜೆಪಿ ಸೇರಿರುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಅಮಿತ್ ಶಾ, ರಾಜ್ಯ ಬಿಜೆಪಿ ಘಟಕಕ್ಕೆ ಸೂಚಿಸಿದ್ದಾರೆ.

Facebook Comments

Sri Raghav

Admin