2ನೇ ಬಾರಿಗೆ ಕೀನ್ಯಾ ಅಧ್ಯಕ್ಷರಾಗಿ ಕೆನ್‍ಯಾಟ್ಟಾ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Uhuru-Kenyatta

ನೈರೋಬಿ, ಆ.12-ಕೀನ್ಯಾದ ಅಧ್ಯಕ್ಷರಾಗಿ ಉಹುರು ಕೆನ್‍ಯಾಟ್ಟಾ ಎರಡನೇ ಬಾರಿಗೆ ಚುನಾಯಿತರಾಗಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಜೂಬಲಿ ಅಲೈಯನ್ಸ್ ಪಕ್ಷದ ನಾಯಕ ಕೆನ್‍ಯಾಟ್ಟಾ ಶೇ.54.27ರಷ್ಟು ಮತಗಳನ್ನು ಗಳಿಸಿ ಪುನರಾಯ್ಕೆಯಾದರು. ವಿರೋಧಿ ಬಣವಾದ ಸುಧಾರಣೆ ಮತ್ತು ಪ್ರಜÁಪ್ರಭುತ್ವ ಸಮ್ಮಿಶ್ರ ಪಕ್ಷದ(ಸಿಎಫ್‍ಆರ್‍ಡಿ) ಧುರೀಣ ರೈಲಾ ಒಡಿಂಗಾ ಶೇ.44.74ರಷ್ಟು ಮತ ಗಳಿಸಿ ಹಿನ್ನೆಡೆ ಅನುಭವಿಸಿದ್ದಾರೆ.

ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳ ಆರೋಪಗಳ ನಡುವೆಯೂ ಚುನಾವಣಾ ಆಯೋಗದ ಮುಖ್ಯಸ್ಥ ವಾಫುಲಾ ಚೆಬುಕಟ್ಟಿ ಕೆನ್‍ಯಾಟ್ಟಾ ಅವರ ಪುನರಾಯ್ಕೆಯನ್ನು ಘೋಘಿಸಿದರು. ಚುನಾವಣೆಯು ವಿಶ್ವಾಸಾರ್ಹ, ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿಯೇ ನಡೆದಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin