ಉಗ್ರಾಮಿ ಸಂಘಟನೆ ಸೇರ್ಪಡೆ ಕಾಶ್ಮೀರದ 70 ಯುವಕರು..!

ಈ ಸುದ್ದಿಯನ್ನು ಶೇರ್ ಮಾಡಿ

Jammu-Kahsmir--01

ಜಮ್ಮು, ಆ.13- ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮುಂದುವರೆದಿರುವಂತೆಯೇ ಮತ್ತೊಂದು ಆತಂಕಕಾರಿ ಸಂಗತಿ ವರದಿಯಾಗಿದೆ. ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಿಂದ ಈ ವರ್ಷದ ಏಳು ತಿಂಗಳ ಅವಧಿಯಲ್ಲಿ 70 ಯುವಕರು ಉಗ್ರಗಾಮಿ ಸಂಘಟನೆ ಸೇರ್ಪಡೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯ ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ 70 ಯುವಕರು ಭಯೋತ್ಪಾದನಾ ಸಂಘಟನೆಗಳಿಗೆ ಹೊಸದಾಗಿ ನೇಮಕಗೊಂಡಿದ್ದಾರೆ.
2016ರಲ್ಲಿ 80 ಕಾಶ್ಮೀರಿ ಯುವಕರು ಭಯೋತ್ಪಾದಕರಿಗೆ ಸಾಥ್ ನೀಡಲು ಅವರ ಬಣಗಳನ್ನು ಸೇರಿದ್ದರು. 2015ರಲ್ಲಿ 66 ಮತ್ತು 2004ರಲ್ಲಿ 53 ಯುವಕರು ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದರು.

Facebook Comments

Sri Raghav

Admin