ಕೀನ್ಯಾ ಅಧ್ಯಕ್ಷ ಮರು ಆಯ್ಕೆ ನಂತರ ಹಿಂಸಾಚಾರಕ್ಕೆ 24 ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Kenyan-election

ನೈರೋಬಿ, ಆ.13-ಕೀನ್ಯಾದ ಅಧ್ಯಕ್ಷರಾಗಿ ಉಹುರು ಕೆನ್ಯಾಟ್ಟಾ ಎರಡನೇ ಬಾರಿಗೆ ಚುನಾಯಿತರಾದ ನಂತರ ರಾಜಧಾನಿ ನೈರೋಬಿ ಸೇರಿದಂತೆ ವಿವಿಧೆಡೆ ಭುಗಿಲೆದ್ದ ಹಿಂಸಾಚಾರದಲ್ಲಿ 24 ಮಂದಿ ಮೃತಪಟ್ಟು, ಅನೇಕರು ಗಾಯ ಗೊಂಡಿದ್ದಾರೆ. ಕೀನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಚುನಾವಣೋ ತ್ತರ ಸಾವು-ನೋವುಗಳನ್ನು ದೃಢ ಪಡಿಸಿದೆ. ಅಧ್ಯಕ್ಷರ ಮರು ಆಯ್ಕೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷದ ಬೆಂಬಲಿಗರು ನೈರೋಬಿ ಹಾಗೂ ತಮ್ಮ ಪ್ರಾಬಲ್ಯವಿರುವ ಅನೇಕ ಸ್ಥಳಗಳಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆಯಿತು. ಉದ್ರಿಕ್ತ ಗುಂಪನ್ನು ಎದುರಿಸಲು ಪೊಲೀಸರು ಬಲಪ್ರಯೋಗ ಮಾಡಿದಾಗ ಘರ್ಷಣೆ ನಡೆಯಿತು.

ನೈರೋಬಿಯಲ್ಲಿ 17 ಮಂದಿ ಸೇರಿದಂತೆ ಈವರೆಗೆ 24 ಜನ ಹಿಂಸಾಚಾರಕ್ಕೆ ಬಲಿಯಾಗಿದ್ಧಾರೆ ಎಂದು ಆಯೋಗದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಜೂಬಲಿ ಅಲೈಯನ್ಸ್ ಪಕ್ಷದ ನಾಯಕ ಕೆನ್‍ಯಾಟ್ಟಾ ಶೇ. 54.27ರಷ್ಟು ಮತಗಳನ್ನು ಗಳಿಸಿ ಪುನರಾಯ್ಕೆಯಾದರು. ವಿರೋಧಿ ಬಣವಾದ ಸುಧಾರಣೆ ಮತ್ತು ಪ್ರಜಾಪ್ರಭುತ್ವ ಸಮ್ಮಿಶ್ರ ಪಕ್ಷದ(ಸಿಎಫ್‍ಆರ್‍ಡಿ) ಧುರೀಣ ರೈಲಾ ಒಡಿಂಗಾ ಶೇ.44.74ರಷ್ಟು ಮತ ಗಳಿಸಿ ಹಿನ್ನೆಡೆ ಅನುಭವಿಸಿದ್ದರು.

ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ವಿರೋಧ ಪಕ್ಷಗಳ ಆರೋಪಗಳ ನಡುವೆಯೂ ಚುನಾವಣಾ ಆಯೋಗದ ಮುಖ್ಯಸ್ಥ ವಾಫುಲಾ ಚೆಬುಕಟ್ಟಿ ಕೆನ್‍ಯಾಟ್ಟಾ ಅವರ ಪುನರಾಯ್ಕೆಯನ್ನು ಘೋಷಿಸಿ ದ್ದರು.

Facebook Comments

Sri Raghav

Admin