ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಪರ್ಯಾಯ ಸಂಚಾರ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Iscon-Temple--01

ಬೆಂಗಳೂರು, ಆ.13- ಪ್ರತೀ ವರ್ಷದಂತೆ ಈ ವರ್ಷವೂ ನಗರದ ಇಸ್ಕಾನ್ ಮಂದಿರದಲ್ಲಿ ನಾಳೆ ಮತ್ತು ನಾಡಿದ್ದು ಕೃಷ್ಣಜನ್ಮಾಷ್ಟಮಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಪೊಲೀಸರು ಸೂಕ್ತ ಬಂದೋಬಸ್ತ್ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಸಂಚಾರಿ ವ್ಯವಸ್ಥೆ ಮಾರ್ಪಾಡು ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಗರದ ಹಾಗೂ ವಿವಿಧ ರಾಜ್ಯಗಳ ಹಲವಾರು ಸ್ಥಳಗಳಿಂದ ಗಣ್ಯವ್ಯಕ್ತಿಗಳು, ಸಾರ್ವಜನಿಕರು, ಭಕ್ತಾದಿಗಳು ವಾಹನಗಳ ಮೂಲಕ ಆಗಮಿಸುವುದರಿಂದ ಪಶ್ಚಿಮಕಾರ್ಡ್ ರಸ್ತೆಯಲ್ಲಿ ಸಂಚರಿಸುವ ದೈನಂದಿನ ವಾಹನಗಳ ಜತೆಗೆ ಇಸ್ಕಾನೆಗೆ ಆಗಮಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚರಿಸುವ ಅನಿವಾರ್ಯತೆ ಇದೆ.

ಹಾಗಾಗಿ ಆ.14,15ರಂದು ಸುಗಮ ಸಂಚಾರಕ್ಕಾಗಿ ಮತ್ತು ಸೂಕ್ತ ರೀತಿಯ ಸಂಚಾರ ಬಂದೋಬಸ್ತಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ತಾತ್ಕಾಲಿಕವಾಗಿ ಇಸ್ಕಾನ್ ಮಂದಿರಕ್ಕೆ ಆಗಮಿಸುವ ವಾಹನಗಳ ನಿಲುಗಡೆ ವ್ಯವಸ್ಥೆ ಮತ್ತು ವಾಹನಗಳ ಸಂಚಾರದಲ್ಲಿ ಈ ಕೆಳಕಂಡಂತೆ ಮಾರ್ಪಾಡು ಮಾಡಲಾಗಿದೆ.

ತುಮಕೂರು ರಸ್ತೆ ಕಡೆಯಿಂದ-ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಮಾರಪ್ಪನಪಾಳ್ಯದಲ್ಲಿ ನೇರವಾಗಿ ಸಂಚರಿಸಿ-ಯಶವಂತಪುರ, ಬಿಎಚ್‍ಇಎಲ್, ಮಾರಮ್ಮ ಸರ್ಕಲ್-ಬೆಂಗಳೂರು ನಗರದ ಕಡೆ ಸಂಚರಿಸಬಹುದಾಗಿದೆ. ಇಸ್ಕಾನ್ ದೇವಾಲಯಕ್ಕೆ ಆಗಮಿಸುವ ವಾಹನಗಳಿಗೆ-ವಿವಿಐಪಿ ಪಾರ್ಕಿಂಗ್ ಇಸ್ಕಾನ್ ಬೆಟ್ಟದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಹಾಲಕ್ಷ್ಮಿ ಲೇಔಟ್, ಜ್ಯೂಸ್ ಫ್ಯಾಕ್ಟರಿ ಮೈದಾನದಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಪೈಪ್‍ಲೈನ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ, ಮೆಟ್ರೋ ಕೆಳ ಭಾಗದ ರಸ್ತೆಯಲ್ಲಿ ನಾಲ್ಕು, ದ್ವಿಚಕ್ರ ವಾಹನಗ ನಿಲುಗಡೆಗೆ ಕಲ್ಪಿಸಲಾಗಿದೆ.
ಎರಡು ದಿನಗಳು ಮಾತ್ರ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಗೆ ಎಲ್ಲಾ ಮಾದರಿಯ ವಾಹನ ಚಾಲಕರು ಮತ್ತು ಸವಾರರು ಈ ಮೇಲ್ಕಂಡ ರಸ್ತೆಯಲ್ಲಿ ಸಂಚರಿಸದೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವಂತೆ ಕೋರಲಾಗಿದೆ.

Facebook Comments

Sri Raghav

Admin