ಪಾಕ್‍ನಿಂದ ಮತ್ತೆ ಕದನವಿರಾಮ ಉಲ್ಲಂಘನೆ, ಭಾರತೀಯ ಯೋಧರಿಂದ ಪ್ರತ್ಯುತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಶ್ರೀನಗರ, ಆ.13-ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಕೆ.ಜಿ.ಸೆಕ್ಟರ್‍ನ ಮಾನ್‍ಕೋಟ್‍ನ ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಯೋಧರು ಗುಂಡು ಹಾರಿಸಿದರು. ಭಾರತೀಯ ಯೋಧರೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. 24 ತಾಸುಗಳ ಅವಧಿಯಲ್ಲಿ ಪಾಕಿಸ್ತಾನ ಮೂರನೇ ಬಾರಿ ಕದನ ವಿರಾಮ ಉಲ್ಲಂಘಿಸಿ ಉದ್ಧಟನತನ ತೋರಿದೆ.

ಜಮ್ಮು ಮತ್ತು ಕಾಶ್ಮೀರದ ಮೆಂಧಾರ್ ವಲಯದಲ್ಲಿ ನಿನ್ನೆ ಮುಂಜಾನೆ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಶೆಲ್ ದಾಳಿಯಲ್ಲಿ 45 ವರ್ಷದ ರಾಖಿಯಾ ಬೇಗಂ ಎಂಬುವವರು ಮೃತಪಟ್ಟಿದ್ದರು.

Facebook Comments

Sri Raghav

Admin