ಭೂಕುಸಿತದಲ್ಲಿ ಸಿಲುಕಿದ 2 ಬಸ್ ಗಳು, 8 ಪ್ರಯಾಣಿಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Bus-Acci

ಶಿಮ್ಲಾ, ಅ.13-ಮೇಘಸ್ಫೋಟದಿಂದ ಭಾರೀ ಮಳೆ ಮತ್ತು ಭೂಕುಸಿತಕ್ಕೆ ಎರಡು ಬಸ್‍ಗಳಲ್ಲಿ ಸಿಲುಕಿದ 8 ಪ್ರಯಾಣಿಕರು ಮೃತಪಟ್ಟು, ಇತರ 22 ಮಂದಿ ತೀವ್ರ ಗಾಯಗೊಂಡಿರುವ ಘಟನೆ ಮಂಡಿ-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.   ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಸುಗಳು ಭೂಕುಸಿತದಿಂದ ತೀವ್ರ ಹಾನಿಗೀಡಾಗಿವೆ.

ಕಳೆದ ರಾತ್ರಿ ಈ ದುರಂತ ಸಂಭವಿಸಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಹಿಮಾಚಲಪ್ರದೇಶ ಸಾರಿಗೆ ಸಚಿವ ಜಿ.ಎಸ್.ಬಾಲಿ ಆತಂಕ ವ್ಯಕ್ತಪಡಿಸಿದ್ದಾರೆ.  ಮನಾಲಿಯಿಂದ ಕತ್ರಾಗೆ ಒಂದು ಬಸ್ ತೆರಳುತ್ತಿತ್ತು. ಮತ್ತೊಂದು ಬಸ್ ಮನಾಲಿಯಿಂದ ಚಂಬಾಗೆ ಹೋಗುತ್ತಿದ್ದಾಗೆ ಕೋಟ್ರುಪಿ ಎಂಬಲ್ಲಿ ಚಹಾ ವಿರಾಮಕ್ಕಾಗಿ ಬಸ್ಸುಗಳನ್ನು ನಿಲ್ಲಿಸಿದ್ದಾಗ ಭೂಕುಸಿತ ಸಂಭವಿಸಿತು ಎಂದು ವಿಶೇಷ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಡಿ.ಡಿ. ಶರ್ಮಾ ಹೇಳಿದ್ಧಾರೆ.   ಭೂಕುಸಿತದಿಂದ ಈ ರಸ್ತೆಯಲ್ಲಿನ 800 ಮೀಟರ್ ಕಂದಕ ಉಂಟಾಗಿದೆ.

Facebook Comments

Sri Raghav

Admin