ಮಸೀದಿಯೊಂದರ ಒಳಗೆ ಮನಸೋ ಇಚ್ಚೆ ಗುಂಡು ಹಾರಿಸಿ 8 ಮಂದಿ ಹತ್ಯೆ

Afganistan--01

ಕಾಬೂಲ್, ಆ.13-ಅಫ್ಘಾನಿಸ್ತಾನದ ಟಖರ್ ಪ್ರಾಂತ್ಯದ ಮಸೀದಿಯೊಂದರ ಒಳಗೆ ದುಷ್ಕರ್ಮಿಯೊಬ್ಬ ಮನಸೋ ಇಚ್ಚೆ ಗುಂಡು ಹಾರಿಸಿ 8 ಮಂದಿಯನ್ನು ಹತ್ಯೆ ಮಾಡಿ, 40ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದಾನೆ.   ಸ್ಥಳೀಯ ಪಾಳೇಗಾರನ ಬಂಟನೊಬ್ಬ ಈ ಕೃತ್ಯ ಎಸಗಿದ್ದಾನೆ. ಆತ ಮಸೀದಿಯೊಂದರ ಮೌಲ್ವಿ ಜೊತೆ ವಿವಾದವೊಂದಕ್ಕೆ ಸಂಬಂಧಿಸಿದಂತೆ ದ್ವೇಷ ಹೊಂದಿದ್ದನು ಹಾಗೂ ಆ ದಾಳಿಯ ಗುರಿ ಧರ್ಮಗುರುವೇ ಆಗಿದ್ದರು ಎಂದು ಪ್ರಾಂತೀಯ ಪೊಲೀಸ್ ಮುಖ್ಯಸೃರು ಹೇಳಿದ್ದಾರೆ.

ಈ ಹತ್ಯಾಕಾಂಡದಲ್ಲಿ ಧರ್ಮಗುರು ಅಪಾಯದಿಂದ ಪಾರಾಗಿದ್ದು, ಸಾವು-ನೋವು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin