ಮೈಸೂರು ಜೈಲಿಗೆ ದಿಢೀರ್ ಭೇಟಿ ನೀಡಿದ ಡಿಐಜಿ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

Mysuru----01

ಮೈಸೂರು, ಆ.13- ರಾಜ್ಯದ ವಿವಿಧ ಜಿಲ್ಲೆಗಳ ಜೈಲುಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ಕಾರಾಗೃಹ ಡಿಐಜಿ ರೇವಣ್ಣ ಅವರು ಮೈಸೂರು ಜೈಲಿಗೆ ದಿಢೀರ್ ಭೇಟಿ ನೀಡಿದರು.ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ರೇವಣ್ಣ ಅವರು ಸಂಜೆ ಭೇಟಿ ನೀಡಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಜತೆ ಜೈಲಿನಲ್ಲಿನ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸಿದರು.

ಆನಂತರ ಕೈದಿಗಳನ್ನು ಸಹ ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸಿ ಸಮಸ್ಯೆಗಳನ್ನು ಆಲಿಸಿದರು. ವಿವಿಧ ಜೈಲುಗಳಲ್ಲಿ ಕೈದಿಗಳನ್ನು ನೋಡಲು ಬರುವ ಕುಟುಂಬಸ್ಥರ ಬಳಿ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ, ಮೊಬೈಲ್ ಬಳಕೆಯಾಗುತ್ತಿದೆ, ಜೈಲಿನೊಳಗೆ ಮಾದಕ ವಸ್ತು ಸರಬರಾಜಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಡಿಐಜಿಯವರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.

Facebook Comments

Sri Raghav

Admin