ವಿಶ್ವ ಅಥ್ಲಿಟಿಕ್ಸ್ ಫೈನಲ್ಸ್ ನಲ್ಲಿ ಎಡವಿದರೂ ದಾಖಲೆನಿರ್ಮಿಸಿದ ದೇವಿಂದರ್

ಈ ಸುದ್ದಿಯನ್ನು ಶೇರ್ ಮಾಡಿ

Devendar-1

ಲಂಡನ್, ಆ. 13- ವಿಶ್ವ ಅಥ್ಲಿಟಿಕ್ಸ್‍ನ ಫೈನಲ್ಸ್‍ಗೇರಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಚರಿತ್ರೆಯನ್ನು ನಿರ್ಮಿಸಿದ್ದ ದೇವಿಂದರ್ ಕಾಂಗ್ ಅವರು ಫೈನಲ್ಸ್‍ನಲ್ಲಿ 12 ಸ್ಥಾನಕ್ಕೆ ಕುಸಿಯುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇಂದು ಇಲ್ಲಿನ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಅಥ್ಲಿಟಿಕ್ಸ್ ನ ಜಾವೆಲಿನ್ ಥ್ರೋನ ವಿಭಾಗದಲ್ಲಿ ಪಾಲ್ಗೊಂಡಿದ್ದ ಏಕೈಕ ಭಾರತೀಯ ದೇವಿಂದರ್ 84.7 ಮೀಟರ್‍ವರೆಗೆ ಮಾತ್ರ ಜವೆಲಿಯನ್ ಎಸೆಯಲು ಶಕ್ತರಾದರು. 13 ಮಂದಿ ಅಥ್ಲೀಟ್‍ಗಳು ಪಾಲ್ಗೊಂಡಿದ್ದ ಫೈನಲ್ ಪಂದ್ಯದಲ್ಲಿ ದೇವಿಂದರ್ ಮೊದಲ ಸುತ್ತಿನಲ್ಲಿ 75.40 ದೂರ ಎಸೆದರೂ ಎರಡನೇ ಸುತ್ತಿನಲ್ಲಿ ಪೋಲ್ ಆದರೂ ಕೂಡ ಮೂರನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಕೂಡ ಕೇವಲ 84.57 ಮೀಟರ್‍ವರೆಗೆ ಮಾತ್ರ ಜಾವೆಲಿಯನ್ ಎಸೆಯಲು ಶಕ್ತರಾಗಿ 12ನೆ ಸ್ಥಾನಕ್ಕೆ ಕುಸಿದರೂ ಇದು ಅವರ ಜೀವನದ ಸರ್ವಶ್ರೇಷ್ಠ ಪ್ರದರ್ಶನವಾಗಿದೆ.

ಜರ್ಮನಿಯ ಜಾನ್‍ನೆನಿಸ್ ವಿಟ್ಟರ್ 89.89 ಮೀಟರ್‍ವರೆಗೆ ಜವಲಿಯನ್ ಎಸೆದು ಸ್ವರ್ಣ ಪದಕವನ್ನು ಗೆದ್ದುಕೊಂಡರೆ ಜೆಕ್ ರಿಪಬ್ಲಿಕ್‍ನ ಡು ಜಕ್ಬುಬ್ ವಡ್ಲೆ ಬೆಳ್ಳಿ ಪದಕ (89.73 ಮೀ.) ಹಾಗೂ ಪೇಟರ್ ಪ್ರೈಡ್ರೈಚ್ (88.32 ಮೀ. ) ಕಂಚಿನ ಪದಕವನ್ನು ಗೆದ್ದುಕೊಂಡರೆ, 88.26 ಮೀಟರ್‍ವರೆಗೆ ಜವೆಲಿಯನ್‍ಯನ್ನು ಎಸೆದ ಥಾಮಸ್ ರೋಲೆರ್ 4ನೆ ಸ್ಥಾನವನ್ನು ಖಚಿತಪಡಿಸಿಕೊಂಡರು.

ಗಾಯದ ಸಮಸ್ಯೆ ತುಂಬಾ ಕಾಡಿತು:

ಅರ್ಹತಾ ಸುತ್ತಿನ ಪಂದ್ಯದ ವೇಳೆ ಭುಜದ ನೋವಿನಿಂದ ಬಳಲಿದ್ದ ದೇವಿಂದರ್ ಕಾಂಗ್ ಇಂದು ಕೂಡ ನೋವಿನಿಂದ ಕಣಕ್ಕಿಳಿದಿದ್ದರು, ಆದ್ದರಿಂದಲೇ ನಾನು ಫೈನಲ್‍ನಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ನಾನು ಗಾಯದ ಸಮಸ್ಯೆಯಿಂದ ಬಳಲದಿದ್ದರೆ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದೆ, ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಿ ಪದಕವನ್ನು ಗೆದ್ದು ಕೊಡುತ್ತೇನೆ ಎಂದು ಹೇಳಿದ್ದಾರೆ. ಫೈನಲ್ಸ್‍ನಲ್ಲಿ 12 ನೆ ಸ್ಥಾನ ಪಡೆದರೂ ಭಾರತ ತಂಡದ ಅಥ್ಲೀಟಿಕ್ಸ್‍ಗಳ ಸಾಲಿನಲ್ಲಿ ಪಂಜಾಬ್ ಕ ಪೂತರ್ ದೇವಿಂದರ್ ಅಗ್ರಸ್ಥಾನಿಯಾಗಿಯೇ ಉಳಿದಿದ್ದಾರೆ.

Facebook Comments

Sri Raghav

Admin