ಸರ್ವಜ್ಞ-ತಿರುವಳ್ಳುವರ್ ಈ ದೇಶದ ಎರಡು ಕಣ್ಣುಗಳು

ಈ ಸುದ್ದಿಯನ್ನು ಶೇರ್ ಮಾಡಿ
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಅಂಗವಾಗಿ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ , ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಡಾ.ಅಜಯ್‍ಕುಮಾರ್‍ಸಿಂಗ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ ಅಂಗವಾಗಿ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ , ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್‍ಕುಮಾರ್‍ಸಿಂಗ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಬೆಂಗಳೂರು,ಆ.13-ದಾರ್ಶನಿಕ ಕವಿಗಳಾದ ತಮಿಳಿನ ತಿರುವಳ್ಳುವರ್ ಮತ್ತು ಕರ್ನಾಟಕದ ಸರ್ವಜ್ಞ ಇವರಿಬ್ಬರು ಈ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಡಾ.ಆಜಯ್‍ಸಿಂಗ್ ಹೇಳಿದರು. ಅಖಿಲ ಭಾರತ ಭಾಷಾ ಸೌಹಾರ್ದತೆ ದಿನದ ಅಂಗವಾಗಿ ಟೌನ್‍ಹಾಲ್‍ನ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹುಭಾಷಾ ಗಾಯನ, ಬಹು ಭಾಷಾ ಕವಿಗೋಷ್ಠಿ, ಬಹು ಜ್ಞಾನಪದ ವೈವಿದ್ಯತೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಭಾಷೆಯ ಜೊತೆ ಆಪ್ತತೆ ಮತ್ತು ನಿಕಟಸಂಬಂಧ ಇರಬೇಕು, ಬೇರೆ ಭಾಷೆಗಳ ಜೊತೆ ವೈಯಕ್ತಿಕ ಸೌಹಾರ್ದತೆಯಿಂದ ಕೂಡಿರುವುದು ಕೂಡಾ ಅಗತ್ಯ, ಮಾನವ ಇತಿಹಾಸದಲ್ಲಿ ಭಾಷೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಸೌಹಾರ್ದತೆಯ ಸೇತುವೆ ಈ ಭಾಷೆಯೇ ಆಗಿದೆ ಎಂದು ಅವರು ವಿಶ್ಲೇಷಿಸಿದರು.
ನಮ್ಮ ಭಾರತದ ಗಟ್ಟಿತನ ಇರುವುದು ವಿವಿಧೆತೆಯಲ್ಲಿ ಏಕತೆ ಹೊಂದಿರುವುದರಿಂದ ಅದೇ ಭಾಷೆಯ ಶಕ್ತಿ. ಇದನ್ನು ಕಾಪಾಡಿಕೊಂಡು ಬಲಪಡಿಸುವುದು ಎಲ್ಲರ ಕರ್ತವ್ಯವಾಗಬೇಕು. ಯಾವುದೇ ಭಾಷೆಯೇ ಮೇಲೆ ಗೌರವ ಇರಬೇಕು. ನಮ್ಮ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು. ಭಾಷೆ ನಿಂತ ನೀರಲ್ಲ. ನಿರಂತರವಾಗಿ ಹರಿಯುವ ಹೊಳೆ ಅದು. ನಮ್ಮ ಸಾಹಿತ್ಯ ಸಂಸ್ಕøತಿಗಳನ್ನು ಪೋಷಿಸುವುದರ ಜೊತೆಗೆ ಬೇರೆ ಭಾಷೆಯ ಕವಿ ಕಾವ್ಯಗಳನ್ನು ಓದಬೇಕು. ಬೇರೆ ರಾಜ್ಯಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು ಎಂದರು.
ಬೇರೆ ಭಾಷೆಗಳಲ್ಲೂ ನಾಮಫಲಕಗಳನ್ನು ಹಾಕುವುದರಿಂದ ಯಾವ ತೊಂದರೆ ಇಲ್ಲ. ನಮಗೆ ನಮ್ಮ ಬಗ್ಗೆ ಮತ್ತು ನಮ್ಮ ಭಾಷೆ ಬಗ್ಗೆ ಆತ್ಮವಿಶ್ವಾಸ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಸಾಹಿತಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಪರಭಾಷಾ ಸಾಹಿತ್ಯವನ್ನು ಅಭ್ಯಸಿಸುವ ಮನೋವೃತ್ತಿ ಮುಖ್ಯ ಎಂದರು.
ಬೇರೆ ಭಾಷೆಗಳ ಸಾಹಿತ್ಯವನ್ನು ನಾವು ಓದುವುದು ಅಗತ್ಯ. ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲೂ ಶ್ರೇಷ್ಠಕವಿಗಳು ಇದ್ದಾರೆ. ಅವರನ್ನು ಓದುವ ಮೂಲಕ ನಾವು ನಮ್ಮ ಭಾಷೆಯನ್ನು ಸಮೃದ್ಧಿಗೊಳಸಬೇಕು. ಪರಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡುವಂತೆ, ಕನ್ನಡ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದ ಮಾಡಬೇಕು ಎಂದು ಹೇಳಿದರು.
ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಬಲವಂತರಾವು ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin