ಸೋಲಿನೊಂದಿಗೆ ವಿದಾಯ ಹೇಳಿದ ಶರವೇಗದ ಸರದಾರ ಬೋಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bolt--01

ಲಂಡನ್, ಆ.13-ವಿಶ್ವದ ಶರವೇಗದ ಸರದಾರ ಜಮೈಕಾದ ಉಸೈನ್ ಬೋಲ್ಟ್ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ 4×100 ಮೀಟರ್ ರಿಲೇಯಲ್ಲಿ ಬೋಲ್ಟ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರ ತಂಡ ಸೋಲು ಅನುಭವಿಸಿತು. ಇದರೊಂದಿಗೆ ಕೊನೆಯ ಓಟದಲ್ಲಿ ಜಮೈಕಾ ತಂಡಕ್ಕೆ ಚಿನ್ನ bಕ್ಕಿಸಿಕೊಡಬೇಕೆಂಬ ಶರವೇಗದ ಸರದಾರನ ಕನಸು ಸಾಕಾರಗೊಳ್ಳಲಿಲ್ಲ. 4×100 ಮೀಟರ್ ರಿಲೇಯಲ್ಲಿ ಬ್ರಿಟನ್ ಚಿನ್ನ, ಅಮೆರಿಕ ಬೆಳ್ಳಿ ಮತ್ತು ಜಪಾನ್ ಕಂಚು ಪದಕ ಗೆದ್ದುಕೊಂಡವು. ಕಳೆದ ವಾರ 100 ಮೀಟರ್ ಓಟ ಸ್ಪರ್ಧೆಯಲ್ಲಿ ಬೋಲ್ಟ್ ಕಂಚು ಪದಕ ಗೆದ್ದಿದ್ದರು.

Facebook Comments

Sri Raghav

Admin