ಹಾಡಿಯಿಂದ ನಾಡಿಗೆ ಆಗಮಿಸಿದ ದಸರಾ ಆನೆಗಳ ಮೊದಲ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Elehant--01

ಮೈಸೂರು, ಆ.13- ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಹಾಡಿಯಿಂದ ನಾಡಿಗೆ ಆಗಮಿಸಿದೆ. ನಗರದ ಹೊರವಲಯದ ಇಲವಾಲ ಬಳಿ ಇರುವ ಅಲೋಕಾದಲ್ಲಿ ಮೊದಲ ತಂಡದ ಎಂಟು ಆನೆಗಳು ವಾಸ್ತವ್ಯ ಹೂಡಿದ್ದು, ರಾಜೋಪಚಾರ ನೀಡಲಾಗುತ್ತಿದೆ. ಜಂಬು ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವರಲಕ್ಷ್ಮಿ, ಕಾವೇರಿ, ಭೀಮ, ವಿದ್ಯಾ ಹಾಗೂ ವಿಜಯ ಎಂಬ ಆನೆಗಳು ಇಲ್ಲಿ ತಂಗಿವೆ.

ಮೊದಲ ತಂಡದ ಆನೆಗಳನ್ನು ಅಶೋಕಪುರಂನಲ್ಲಿನ ಅರಣ್ಯ ಭವನಕ್ಕೆ ಕರೆತಂದು ಅಲ್ಲಿ ಆನೆಗಳಿಗೆ ಸಿಂಗರಿಸಿ ಅರಣ್ಯ ಇಲಾಖೆಯವರು ಪೂಜೆ ಸಲ್ಲಿಸಿ ನಂತರ ಅರಣ್ಯ ಭವನದಿಂದ ಮೆರವಣಿಗೆ ಮೂಲಕ ಅಶೋಕಪುರಂ, ಬಲ್ಲಾಳ ವೃತ್ತ, ಆರ್‍ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ವೃತ್ತದ ಮೂಲಕ ಮೈಸೂರು ಅರಮನೆಗೆ 17ರಂದು ಕರೆತರಲಾಗುತ್ತದೆ. ಅಂದು ಬೆಳಗ್ಗೆ 11 ಗಂಟೆಗೆ ಅರಮನೆ ಪ್ರವೇಶಿಸಲಿದ್ದು, ಅರಮನೆಯ ಜೈಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಿದ್ದಾರೆ.

Facebook Comments

Sri Raghav

Admin