ಅಮಿತ್ ಷಾ ಭಯದಿಂದ ಯುದ್ಧಕ್ಕೂ ಮೊದಲೇ ಶಸ್ತ್ರ ತ್ಯಜಿಸಿದೆ ಕಾಂಗ್ರೆಸ್‍ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

CTRavi

ಬೆಂಗಳೂರು, ಆ.14-ಯುದ್ಧಕ್ಕಿಂತ ಮುಂಚೆಯೇ ಕಾಂಗ್ರೆಸ್‍ನವರು ಶಸ್ತ್ರ ತ್ಯಾಗ ಮಾಡುವವರಿದ್ದಾರೆ. ಅಷ್ಟರಮಟ್ಟಿಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾಂಗ್ರೆಸ್‍ನಲ್ಲಿ ಭಯ ಹುಟ್ಟಿಸಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಷಾ ಹೆಸರು ಹೇಳಿದರೆ ಸಾಕು ಕಾಂಗ್ರೆಸ್ ಮುಖಂಡರಿಗೆ ಭಯ ಶುರುವಾಗುತ್ತೆ. ಇನ್ನು ಅಮಿತ್ ಷಾ ಬೆಂಗಳೂರಿಗೆ ಬಂದು ಮುಖಂಡರ, ಕಾರ್ಯಕರ್ತರ ಸಭೆ ಮಾಡುತ್ತಿದ್ದಾರೆ ಎಂದರೆ ಇನ್ನೆಷ್ಟು ಭಯ ಉಂಟಾಗಬಾರದುಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಲ್ಲಿ ಈಗಾಗಲೇ ನಡುಕ ಉಂಟಾಗಿದೆ. ಚುನಾವಣೆಗೆ ನಾವು ಸಜ್ಜಾಗುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದರಂತೆ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ಸಿ.ಟಿ.ರವಿ ಹೇಳಿದರು.

Facebook Comments

Sri Raghav

Admin