ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಳ್ಳಕ್ಕೆ ಹರಿಯುವ ನದಿ ಸಮುದ್ರವನ್ನು ಸೇರುವಂತೆ ನೀಚನನ್ನು ಸೇರಿದ ವಿದ್ಯೆಯೇ ಅವನನ್ನು ದೃಷ್ಟಿದೂರನಾದ ರಾಜನೊಡನೆ ಸೇರಿಸುವುದು. ಅನಂತರ ಅತ್ಯಧಿಕವಾದ ಭಾಗ್ಯವೇ ಲಭಿಸುವುದು. – ಹಿತೋಪದೇಶ

Rashi

ಪಂಚಾಂಗ : ಸೋಮವಾರ, 14.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.41
ಚಂದ್ರ ಅಸ್ತ ಮ.11.39 / ಚಂದ್ರ ಉದಯ ರಾ.11.45
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.07.46) / ನಕ್ಷತ್ರ: ಭರಣಿ (ರಾ.03.57)
ಯೋಗ: ಗಂಡ (ಬೆ.09.29) / ಕರಣ: ಭದ್ರೆ-ಭವ (ಬೆ.08.42-ರಾ.07.46)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 30

 

ರಾಶಿ ಭವಿಷ್ಯ :

ಮೇಷ : ಕೆಲಸ-ಕಾರ್ಯಗಳಲ್ಲಿ ಮುನ್ನುಗ್ಗಿ ಕೆಲಸ ಮಾಡಿದರೆ ಜಯ ನಿಮ್ಮದಾಗುವುದು
ವೃಷಭ : ವಾಸ್ತು ಪಂಡಿತರು, ಸಂಖ್ಯಾಶಾಸ್ತ್ರಜ್ಞ ರಿಗೆ ಉತ್ತಮ ಹೆಸರು, ಹಣ ಬರಬಹುದು
ಮಿಥುನ: ಮಠಾಧಿಪತಿಗಳು, ಸಾಧು-ಸಂತರನ್ನು ಗೌರವದಿಂದ ಕಾಣಿರಿ, ಅವರ ಆಶೀರ್ವಾದ ಪಡೆಯಿರಿ
ಕಟಕ : ಮಕ್ಕಳು ನಿಮ್ಮ ಹಿತವಚನ ಕೇಳದೆ ತೊಂದರೆ ಯಲ್ಲಿ ಸಿಲುಕುವರು
ಸಿಂಹ: ಸಹೋದರರು, ಬಂಧು ಮಿತ್ರರು, ಸಹ ಪಾಠಿಗಳು ಎಲ್ಲರೂ ನಿಮ್ಮನ್ನು ದೂಷಿಸುವರು
ಕನ್ಯಾ: ನಿಮ್ಮ ಅಭಿಪ್ರಾಯಕ್ಕೆ ಯಾರೂ ಮಾನ್ಯತೆ ಕೊಡುವುದಿಲ್ಲ

ತುಲಾ: ದಾನ-ಧರ್ಮ ಮಾಡಿರಿ, ಶುಭವಾಗುವುದು
ವೃಶ್ಚಿಕ : ಸುಖ-ದುಃಖಗಳು ಸಮಾನವಾಗಿರುವುವು
ಧನುಸ್ಸು: ಆಯುಧಗಳಿಂದ ಗಾಯಗಳಾಗಬಹುದು
ಮಕರ: ಪಾಲುದಾರಿಕೆಯಿಂದ ಆದಷ್ಟು ಹಿಂದೆ ಸರಿಯುವುದು ಉತ್ತಮ, ಹೆಚ್ಚು ಮೌನವಾಗಿರಿ
ಕುಂಭ: ಕೃಷಿಕರಿಗೆ ಸಾಧಾರಣ ಲಾಭವಿದೆ
ಮೀನ: ಅನಗತ್ಯ ಖರ್ಚುಗಳ ಬಗ್ಗೆ ಹಿಡಿತವಿರಲಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin