‘ನನ್ನ ಮಗಳ ಪ್ರಾಣಕ್ಕೆ ಬೆಲೆ ಕಟ್ಟಿದರೆ ಕ್ಷಮಿಸಲಾರೆ’

ಈ ಸುದ್ದಿಯನ್ನು ಶೇರ್ ಮಾಡಿ

Park--01-BBMP--01

ಬೆಂಗಳೂರು, ಆ.14-ನನ್ನ ಮಗಳ ಪ್ರಾಣಕ್ಕೆ ಬೆಲೆ ಕಟ್ಟಿದರೆ ಕ್ಷಮಿಸಲಾರೆ. ನಮಗಾದ ಅನ್ಯಾಯ ಮತ್ಯಾರಿಗೂ ಆಗದಂತೆ ಎಚ್ಚರ ವಹಿಸಿ…. ಇದು ತಮ್ಮ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ನೀಡಲು ಮುಂದಾದ ಮೇಯರ್ ಜಿ.ಪದ್ಮಾವತಿ ಅವರನ್ನು ಇತ್ತೀಚೆಗೆ ಮೃತಪಟ್ಟ ಬಾಲಕಿ ಪ್ರಿಯಾ ಅವರ ತಂದೆ ಸುಬ್ರಮಣಿ ತರಾಟೆಗೆ ತೆಗೆದುಕೊಂಡ ಪರಿ ಇದು. ಮಹದೇವಪುರದ ಎಂವಿಜೆ ಬಡಾವಣೆಯ ಪಾರ್ಕ್‍ನಲ್ಲಿ ಕಬ್ಬಿಣದ ರಾಡ್ ತಲೆಗೆ ಬಿದ್ದು 13 ವರ್ಷದ ಪ್ರಿಯಾ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಇಂದು ಪಾರ್ಕ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಜಿ.ಪದ್ಮಾವತಿ ಅವರು ಮೃತ ಬಾಲಕಿ ಮನೆಗೂ ಭೇಟಿ ನೀಡಿ ಸಾಂತ್ವಾನ ಹೇಳಲು ಮುಂದಾದರು.

ಈ ವೇಳೆ ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾ ಪೋಷಕರು ಘಟನೆ ಸಂಭವಿಸಿ ಮೂರು ದಿನ ಕಳೆದರೂ ಬಿಬಿಎಂಪಿ ನಿರ್ಲಕ್ಷ್ಯ ಧೋರಣೆ ತಾಳಿದೆ. ನೀವು ನೀಡುವ ಪರಿಹಾರ ನಮಗೆ ಅವಶ್ಯಕತೆ ಇಲ್ಲ. ನನ್ನ ಮಗಳ ಪ್ರಾಣಕ್ಕೆ ಬೆಲೆ ಕಟ್ಟಿದರೆ ನಾವು ಕ್ಷಮಿಸಲ್ಲ. ನಮಗಾದ ಅನ್ಯಾಯ ಬೇರೆ ಪೋಷಕರಿಗೆ ಆಗದಂತೆ ಎಚ್ಚರ ವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.

ಪ್ರಿಯಾ ಪೋಷಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದ ಮೇಯರ್ ಜಿ.ಪದ್ಮಾವತಿ ಅವರು, ಅಚಾತುರ್ಯಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಿಯಾ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಧನ ಘೋಷಣೆ ಮಾಡಿದರು.

Facebook Comments

Sri Raghav

Admin