ಪನಾಮ ಹಗರಣ : ಅಮಿತಾಬ್ ಬಚ್ಚನ್ ಮೇಲೆ ಐಟಿ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

amithabh
ನವದೆಹಲಿ, ಆ.14-ಪನಾಮ ಹಗರಣದಲ್ಲಿ ನವಾಜ್ ಷರೀಫ್ ಅವರ ಪ್ರಧಾನಮಂತ್ರಿ ಹುದ್ದೆಗೆ ಚ್ಯುತಿ ಬಂದ ಬೆನ್ನಲ್ಲೇ, ಇದೇ ರೀತಿಯ ಪ್ರಕರಣದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹೆಸರೂ ತಳುಕು ಹಾಕಿಕೊಂಡಿದೆ. ಪನಾಮ ದಾಖಲೆಗಳಲ್ಲಿ ಹೆಸರಿಸಲಾದ ವಿದೇಶಿ ಕಂಪನಿಗಳೊಂದಿಗೆ ಒಡನಾಟ ಹೊಂದಿರುವವರ ಪಟ್ಟಿಯಲ್ಲಿ ಬಿಗ್-ಬಿ ಹೆಸರೂ ಇದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಚ್ಚನ್ ಮೇಲೆ ಕಣ್ಣಿಟ್ಟಿದ್ದಾರೆ.

ವಿದೇಶಗಳಲ್ಲಿ ಅದರಲ್ಲೂ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‍ಗಳಲ್ಲಿ ಬಚ್ಚನ್ ಹೊಂದಿದ್ದಾರೆ ಎನ್ನಲಾದ ಸ್ವತ್ತುಗಳು ಮತ್ತು ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ಆದಾಯ ಇಲಾಖೆಯ ಉನ್ನತಾಧಿಕಾರಿಗಳು ಆ ದ್ವೀಪಕ್ಕೆ ತೆರಳಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.  ಕೆರೇಬಿಯನ್‍ನಲ್ಲಿರುವ ಬ್ರಿಟಿಷ್ ವರ್ಜಿನ್ ದ್ವೀಪಗಳು ಹಲವಾರು ಗಣ್ಯರ ಆಸ್ತಿ ಗಳಿಕೆಯ ಸ್ವರ್ಗವಾಗಿವೆ. ಪನಾಮ ಪೇಪರ್ಸ್‍ನಲ್ಲಿ ಇಂಥ ಸ್ವತ್ತುಗಳನ್ನು ಹೊಂದಿರುವವರ ಪಟ್ಟಿಯೇ ಇದೆ. ಬಚ್ಚನ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿದೆ.

 

 

Facebook Comments

Sri Raghav

Admin