ಬಿಜೆಪಿಯವರು ತಲೆಗೆ ಹುಳು ಬಿಡ್ತಾರೆ ಹುಷಾರ್ : ಬೈರತಿ ಬಸವರಾಜ

ಈ ಸುದ್ದಿಯನ್ನು ಶೇರ್ ಮಾಡಿ

Byrati-Basavaraj--01

ಕೆಆರ್‍ಪುರ, ಆ.14- ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲಿ ಕುಳಿತಿದ್ದ ಬಿಜೆಪಿಯವರು ಇದೀಗ ದಿಢೀರನೆ ಮೋದಿ ಅಭಿವೃದ್ಧಿ ಮಾಡಿದ್ರು ಎಂದು ಮನೆ ಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸುವ ಮೂಲಕ ತಲೆ ಕೆಡಿಸಲು ಮುಂದಾಗುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಶಾಸಕ ಬೈರತಿ ಬಸವರಾಜ ಗುಡುಗಿದ್ದಾರೆ.
ಹೊರಮಾವು ವಾರ್ಡ್‍ನ ಕೊತ್ತನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಅಭಿವೃದ್ಧಿ ಮಾಡಿರುವುದು ಮೋದಿ ಅಲ್ಲ ನಾವು. ನಾವು ಅಭಿವೃದ್ಧಿ ಕೆಲಸ ಮಾಡಿದ್ದರೆ ಮತ ಹಾಕಿ, ಇಲ್ಲದಿದ್ದರೆ ಹಾಕಬೇಡಿ ಎಂದು ಹೇಳಿದರು. ಕೊತ್ತನೂರು ಹಳೇ ಪೊಲೀಸ್ ಠಾಣೆ ಪಕ್ಕದ ರಸ್ತೆಗಳ ಅಭಿವೃದ್ಧಿಯನ್ನು 50 ಲಕ್ಷ ರೂ.ವೆಚ್ಚದಲ್ಲಿ ಮಾಡುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು, ಗುಣಮಟ್ಟದಿಂದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಿ ಎಂದು ಸ್ಥಳೀಯರಿಗೆ ಸೂಚಿಸಿದರು.

ಬಡವರಿಗೆ 60 ಲಕ್ಷ ರೂ.ಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. 130 ಮನೆಗಳಿಗೆ ಹಕ್ಕುಪತ್ರ ಕೊಡಲಾಗುತ್ತಿದೆ ಎಂದರು. ಗೌರಿ ಗಣೇಶ ಹಬ್ಬವನ್ನು ಪ್ರತಿಯೊಬ್ಬ ಬಡವನೂ ಮಾಡಬೇಕೆಂಬ ದೃಷ್ಟಿಯಿಂದ ಕ್ಷೇತ್ರದ 60ಸಾವಿರ ಜನಕ್ಕೆ ರೇಷನ್ ವಿತರಿಸಿ, ಹೆಣ್ಣುಮಕ್ಕಳಿಗೆ ಸೀರೆಗಳನ್ನು ನೀಡುತ್ತಿದ್ದೇವೆ ಎಂದರು.
ಮುಂದಿನ ಐದು ತಿಂಗಳಲ್ಲಿ ಈ ಭಾಗಕ್ಕೆ ಕಾವೇರಿ ನೀರು ಬರಲಿದೆ. ಈ ಭಾಗದ ಅಭಿವೃದ್ಧಿಗೆ 3.75 ಕೋಟಿ ಅಗತ್ಯವಿದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ. ಈ ಅನುದಾನವನ್ನೂ ಶೀಘ್ರವೇ ಬಿಡುಗಡೆ ಮಾಡಿಸಿಕೊಡುವೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ್, ನಿಗಮ ಮಂಡಳಿ ಸದಸ್ಯ ಸಂಪತ್, ವಾರ್ಡ್ ಅಧ್ಯಕ್ಷ ನಾರಾಯಣಸ್ವಾಮಿ, ಡಿಸಿಸಿ ಉಪಾಧ್ಯಕ್ಷ ನಗರೇಶ್ವರ ನಾಗೇನಹಳ್ಳಿ ಲೋಕೇಶ್, ಮುಖಂಡರಾದ ಗಣೇಶಣ್ಣ, ಚೇಳಿಕರೆ ಶ್ರೀನಿವಾಸ್, ಬಚ್ಚೇಗೌಡ, ರವಿ, ನರಸಿಂಹಮೂರ್ತಿ, ಸುಧಾಕರ್, ಜೋಸೆಪ್ ಮತ್ತಿತರರಿದ್ದರು.

Facebook Comments

Sri Raghav

Admin