ಮಾರುಕಟ್ಟೆಗೆ ಬಂತು ಸ್ಮಾರ್ಟ್‍ಫೋನ್-ಶೈನ್ ಎಂ 810

ಈ ಸುದ್ದಿಯನ್ನು ಶೇರ್ ಮಾಡಿ

Mafe
ಮಾಫೆ ಮೊಬೈಲ್ ಇತ್ತೀಚೆಗೆ 4ಜಿ-ವೋಲ್ಟ್ ಸಿದ್ಧ ಸ್ಮಾರ್ಟ್‍ಫೋನ್‍ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದ್ಯಾವುದೆಂದರೆ ಶೈನ್ ಎಂ 810. ಭಾರತದ 71ನೇ ಸ್ವಾತಂತ್ರ್ಯದ ಸಲುವಾಗಿ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. ಮಾಫೆ ಶೈನ್ ಎಂ 810ರಲ್ಲಿ ಅತ್ಯುತ್ತಮ ವೇಗದ ಇಂಟರ್‍ನೆಟ್ ಸಂಪರ್ಕ ಮತ್ತು ಉನ್ನತ ವೈಸ್ ಕಾಲ್ ಗುಣಮಟ್ಟದ ಜತೆಗೆ ಕೈಗೆಟಕುವ ದರದಲ್ಲಿ ಇದು ಲಭ್ಯವಿದೆ. ಶೈನ್ ಎಂ 810 ಸ್ಪೋಟ್ರ್ಸ್ ಎ 12.7ಸಿಎಂ (5 ಇಂಚು), (48್ಡ0854 ಪಿಕ್ಸೆಲ್) ಎಫ್‍ಡಬ್ಲ್ಯುವಿಜಿಎ ಡಿಸ್ಪ್ಲೇಗಳನ್ನು ಒಳಗೊಂಡಿರುವುದರಿಂದ ಇದು ಮೂವೀಸ್, ವಿಡಿಯೋಗಳಿಗೆ ಇನ್ನಷ್ಟು ಹೆಚ್ಚಿನ ಮೆರುಗನ್ನು ನೀಡುತ್ತದೆ. ಈ ಸಾಧನವು 1.3ಜಿಎಚ್‍ಜೆಡ್ ಕ್ವಾಡ್ಕೋರ್ ಸ್ಪ್ರೇಡ್ಟ್ರಾಮ್ ಪ್ರೊಸೆಸರ್, 1ಜಿಬಿ ರ್ಯಾಮ್ ಮತ್ತು ಆಂಡ್ರಾಯ್ಡ್ 6.0 ಮಾರ್ಷಾಮಾಲೋ ಓಎಸ್ ಮೂಲಕ ಮೃದುವಾದ ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ.

 

ಶೈನ್ ಎಂ. 810ರಲ್ಲಿ 5 ಎಂಪಿ ರೇರ್ ಕ್ಯಾಮೆರಾ ಜತೆಗೆ ಎಲ್‍ಇಡಿ ಫ್ಲ್ಯಾಷ್ ಮತ್ತು 2 ಎಂಪಿ ಫ್ರೆಂಟ್ ಕ್ಯಾಮೆರಾ ಹಾಗೂ ಸೆಲ್ಫಿ ಫ್ಲ್ಯಾಷ್ ಇದೆ. 2800ಎಂಎಎಚ್ ಲಿ-ಐಯಾನ್ ಬ್ಯಾಟರಿಯೊಂದಿಗೆ 8 ಗಂಟೆಗಳ ಟಾಕ್‍ಟೈಮ್ (ಜಿಎಸ್‍ಎಂ) ಮತ್ತು 200 (ಜಿಎಸ್‍ಎಂ) ಸ್ಟ್ಯಾಂಡ್ ಬೈ ಟೈಂ ಇದರಲ್ಲಿದೆ. ಇದರಲಲಿ 16ಜಿಬಿ ಆಂತರಿಕ ಮೆಮೊರಿ ಸ್ಟೋರೇಜ್, 64 ಜಿಬಿವರೆಗೆ ವಿಸ್ತರಿಸಬಲ್ಲದು. ಇದು ಕೇವಲ 170 ಗ್ರಾಂ ತೂಕ ಮತ್ತು 8.5ಎಂ.ಎಂ.ರಷ್ಟು ದಪ್ಪವಿದೆ. ಶೈನ್ ಎಂ 810 ಇದು ಅತ್ಯಂತ ಕಡಿಮೆ ತೂಕದ ಜತೆಗೆ ನಿಮ್ಮ ಅಂಗೈ ಮತ್ತು ಪಾಕೆಟ್‍ಗೆ ಸರಿಯಾಗಿ ಹೊಂದುವ ಸೈಜ್‍ನಲ್ಲಿದೆ. ಇದಲ್ಲದೆ, ಹೆಚ್ಚುವರಿಯಾಗಿ 4 ಜಿ ವೋಲ್ಟ್ ಸ್ಮಾರ್ಟ್‍ಫೋನ್ ಜಿಪಿಎಸ್, ಬ್ಲೂಟೂಥ್, ವೈ-ಫೈ ಟೆಥರಿಂಗ್, ಸಾಮೀಪ್ಯ ಸಂವೇದಕ ಮತ್ತು ಎಫ್‍ಎಂ ರೇಡಿಯೋ ಇಂತಹ ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿದೆ.

Facebook Comments

Sri Raghav

Admin