ಮೋಡ ಬಿತ್ತನೆ ಮಾಡುತ್ತಿರುವ ವಿಮಾನ ಪರಿವೀಕ್ಷಣೆ ಮಾಡಿದ ಸಚಿವ ಎಚ್ ಕೆ ಪಾಟೀಲ

ಈ ಸುದ್ದಿಯನ್ನು ಶೇರ್ ಮಾಡಿ

Cloud-Seed

ಬೆಂಗಳೂರು- ಆ. 14 : ಮೋಡ ಬಿತ್ತನೆಗಾಗಿ ಅಮೇರಿಕಾದಿಂದ ವಿಶೇಷವಾಗಿ ತರಿಸಿಕೊಳ್ಳಲಾಗಿರುವ ಮೋಡ ಬಿತ್ತನೆಯ ತಂತ್ರಜ್ಞಾನ ಹೊಂದಿರುವ ವಿಮಾನವು ಬೆಂಗಳೂರಿನ ಜಕ್ಕೂರು ಖಾಸಗಿ ನಿಲ್ದಾಣದಲ್ಲಿ ಬಂದಿಳಿದಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಎಚ್ ಕೆ ಪಾಟೀಲರು ಇಂದು ಮದ್ಯಾಹ್ನ ಪರಿಶೀಲನೆ ನಡೆಸಿದರು.  ಮೋಡ ಬಿತ್ತನೆಯ ಕಾರ್ಯಕ್ರಮವು ಆಗಸ್ಟ್-18 ರಿಂದ ಪ್ರಾರಂಭವಾಗುವ ತಾತ್ಕಾಲಿಕ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಕುರಿತು ನಡೆದಿರುವ ಎಲ್ಲಾ ಸಿದ್ದತೆಗಳನ್ನು ಮಾನ್ಯ ಸಚಿವರು ಜಕ್ಕೂರು ಖಾಸಗಿ ನಿಲ್ದಾಣದಲ್ಲಿ ಇಂದು ಪರಿಶೀಲಿಸಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುವ ರಾಡಾರ್ ಮೂಲಕ ಸಂಕೇತಗಳನ್ನು ಪಡೆದು ಆ ಸಂಕೇತಗಳ ಹಿನ್ನೆಲೆಯಲ್ಲಿ ಬಿತ್ತನೆಯ ಅವಕಾಶ ಹೊಂದಿರುವ ಮೋಡಗಳ ಮೇಲೆ ಮೋಡ ಬಿತ್ತನೆ ಮಾಡಲು ತನ್ಮೂಲಕ ಮಳೆಯ ಪ್ರಮಾಣವನ್ನು ವೃದ್ಧಿಸಲು ಮೋಡ ಬಿತ್ತನೆಯಂತಹ ವೈಜ್ಞಾನಿಕ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

 
ಆಗಸ್ಟ್-18 ರಂದು ಮೋಡ ಬಿತ್ತನೆಯ ಕಾರ್ಯಕ್ರಮ ಪ್ರಾರಂಭವಾಗುವ ನಿರೀಕ್ಷೆಗಳಿದ್ದು ಮೋಡ ಬಿತ್ತನೆಯ ತಾಂತ್ರಿಕ ಸಿದ್ದತೆಗಳು ಭರದಿಂದ ನಡೆಯುತ್ತಿವೆ. ಈ ಎಲ್ಲಾ ಸಿದ್ದತೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಮತಿ ನಾಗಾಂಬಿಕಾದೇವಿ, ಶ್ರೀ ಹೆಚ್ ಪಿ ಪ್ರಕಾಶ, ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಶ್ರೀ ಪ್ರಕಾಶಕುಮಾರ, ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ಅಮೇರಿಕಾದಿಂದ ಮೋಡ ಬಿತ್ತನೆಯ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿರುವ ತಂತ್ರಜ್ಞರೊಂದಿಗೆ ಸಚಿವರು ಸಮಾಲೋಚನೆ ನಡೆಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಸುಮಾರು 35.00 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆಗಸ್ಟ್-18 ರಿಂದ ಪ್ರಾರಂಭವಾಗುವ ಕಾರ್ಯಕ್ರಮ ಮಳೆಯ ಅಗತ್ಯವಿರುವ ಮತ್ತು ಮಳೆಯ ಸಾಧ್ಯತೆ ಹೊಂದಿರುವ ಲಭ್ಯತೆಯನ್ನು ಆಧರಿಸಿ ದೈನಂದಿನ ರಾಡಾರ್ ಚಿತ್ರಗಳ ಮತ್ತು ಸಂಕೇತಗಳ ಆಧಾರದ ಮೇಲೆ ಮೋಡ ಬಿತ್ತನೆ ಕೈಗೊಳ್ಳಲಾಗುತ್ತದೆ.
ಮೋಡ ಬಿತ್ತನೆ :
1. ಮೋಡಗಳಲ್ಲಿ ತೇವಾಂಶವಿದ್ದಾಗಲೂ ಮಳೆಬಾರದ ಸ್ಥಿತಿ ಉಂಟಾದಾಗ ಮತ್ತು ಮೋಡಗಳು ಸಾಮಥ್ರ್ಯ ಕಳೆದುಕೊಂಡು ಚದುರಿ ಹೋಗುವುದನ್ನು ತಡೆದು ತೇವಾಂಶವನ್ನು ಹನಿಯಾಗಿ ಪರಿವರ್ತನೆಗೊಳಿಸಲು ವೈಜ್ಞಾನಿಕವಾಗಿ ಪ್ರೇರೇಪಿಸುವ ತಂತ್ರಜ್ಞಾನವೇ ಮೊಡ ಬಿತ್ತನೆ.
2. ಮೋಡಬಿತ್ತನೆ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಒಂದು ವಿಧಾನ.
3. ಮಳೆಗಾಲದಲ್ಲಿ ಮೋಡವಿದ್ದರೂ ಮಳೆ ಬಾರದೆ ಮೋಡ ಮುಂದೆ ಚಲಿಸಿ ಹೋಗುವ ಅನುಭವ ಕನರ್ಾಟಕದ ರೈತ ಬಾಂಧವರಿಗೆ ಪದೇ, ಪದೇ ಆಗುತ್ತಿರುವ ಬವಣೆ
4. ಮೋಡಗಳಲ್ಲಿ ಸಾಕಷ್ಟು ತೇವಾಂಶವಿದ್ದಾಗಲೂ ಮಳೆಬಾರದಿರುವಿಕೆ ಅತಿಸೂಕ್ಷ್ಮ ಕಣಗಳ ಅಭಾವವೇ ಕಾರಣವೆಂದು ಮೋಡ ಭೌತಶಾಸ್ತ್ರ ಹೇಳುತ್ತದೆ.
5. ಇಂಥ ಪರಿಸ್ಥಿತಿಯಲ್ಲಿ ಮೋಡ ಉಷ್ಣಾಂಶವನ್ನೇ ಗಮನಿಸಿ ಸಿಲ್ವರ್ ಐಯೋಡೈಡ್ ಅಥವಾ ಸೋಡಿಯಂ ಕ್ಲೋರೈಡ್ ಇವುಗಳನ್ನು ಸಣ್ಣ ಕಣಗಳಾಗಿ ಮೋಡದಲ್ಲಿ ಬಿತ್ತುವುದು. ಇದರಿಂದ ಮೋಡದಲ್ಲಿದ್ದ ತೇವಾಂಶ ಹನಿಯಾಗಿ ಪರಿವರ್ತನೆಗೊಂಡು ಮಳೆ ರೂಪದಲ್ಲಿ ಕೆಳಗೆ ಬರುತ್ತದೆ.
6. ಬರಗಾಲದ ತೀವ್ರತೆಯನ್ನು ಕಡಿಮೆ ಮಾಡುವ ಎಲ್ಲ ವಿಧಾನಗಳಲ್ಲಿ ಮೋಡದ ಬಿತ್ತನೆ ಅತಿ ಕಡಿಮೆ ವೆಚ್ಚದಿಂದ ಮಾಡುವ ವಿಧಾನ.
7. ಜಗತ್ತಿನಲ್ಲಿ ಸುಮಾರು 45 ದೇಶಗಳು ಮೋಡಬಿತ್ತನೆ ಸುಮಾರು 40 ವರ್ಷಗಳಿಂದ ಮಾಡುತ್ತಾ ಬಂದಿವೆ.
8. 2003ನೇ ಇಸವಿಯಲ್ಲಿ ಶ್ರೀ ಎಸ್.ಎಂ. ಕೃಷ್ಣ ಅವರ ಸಕರ್ಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಶ್ರೀ ಎಚ್.ಕೆ. ಪಾಟೀಲರವರ ನೇತೃತ್ವದಲ್ಲಿ 83 ದಿವಸ ಯಶಸ್ವಿಯಾಗಿ ಮೋಡ ಬಿತ್ತನೆಯ ಕಾರ್ಯಕ್ರಮವನ್ನು 9 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು.
9. 2003ನೇ ಇಸವಿಯ ಮೋಡ ಬಿತ್ತನೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವ ಬಗ್ಗೆ ತಾಂತ್ರಿಕ ಮತ್ತು ವೈಜ್ಞಾನಿಕ ವರದಿಗಳು ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯ ಇವೆ.
10. 2008ರ ಜುಲೈ 19, 20 ಮತ್ತು 21 ರಂದು ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಶ್ರೀ ಎಚ್.ಕೆ. ಪಾಟೀಲರು ಖಾಸಗಿಯಾಗಿ ಸ್ವಯಂ ಸೇವಾ ಸಂಸ್ಥೆಯಾದ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಮೋಡ ಬಿತ್ತನೆಯನ್ನು ಮಾಡಿಸಿದರು. ಈ ಕಾಯರ್ಾಚರಣೆಯ ಸಂದರ್ಭದಲ್ಲಿ ಮೋಡ ಬಿತ್ತನೆ ಕೈಗೊಂಡ ಪ್ರದೇಶದಲ್ಲಿ ಕನಿಷ್ಟ 20 ಮಿ.ಮೀ. ಮತ್ತು ಗರಿಷ್ಟ 45 ಮಿ.ಮೀ. ಮಳೆಯಾಗಿರುವ ವೈಜ್ಞಾನಿಕ ವರದಿಗಳು ಕನರ್ಾಟಕ ಸಕರ್ಾರದ ಬರಪರಿಹಾರದ ಕೋಶದಲ್ಲಿಯೇ ಲಭ್ಯವಿದೆ.
11. ಇದಾದನಂತರ ಕನರ್ಾಟಕದ ಅನುಭವದ ಆಧಾರದ ಮೇಲೆ ಮಹಾರಾಷ್ಟ್ರ ಹಾಗೂ ಆಂದ್ರ ಪ್ರದೇಶಗಳು ಮೋಡಬಿತ್ತನೆಯನ್ನು ಪ್ರಾರಂಭಿಸಿದವು.
12. ಆಂದ್ರ ಪ್ರದೇಶದಲ್ಲಿ ಮೋಡಬಿತ್ತನೆಯ ಕಾರ್ಯಕ್ರಮವನ್ನು ಕಳೆದ 10 ವರ್ಷಗಳಿಂದ ಸತತವಾಗಿ ಸಕರ್ಾರದ ವತಿಯಿಂದ ನಡೆಸಲಾಗುತ್ತಿದೆ.
13. ಮೋಡ ಬಿತ್ತನೆಯ ಪರಿಣಾಮವಾಗಿ ಆಂದ್ರ ಪ್ರದೇಶದ ಬರಪೀಡಿತ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಇದನ್ನೊಂದು ಕಾರ್ಯಕ್ರಮವನ್ನಾಗಿ ಜಾರಿಗೊಳಿಸಲಾಗುತ್ತಿದೆ.
14. ರಾಜ್ಯದಲ್ಲಿ ಬೀಳುವ ಮಳೆ ಮತ್ತು ಹಂಚಿಕೆಯು ತುಂಬಾ ಏರು ಪೇರು ಸ್ವರೂಪದ್ದಾಗಿದೆ. ಮಳೆಗಾಲದ ಸುಮಾರು 55 ದಿನಗಳಲ್ಲಿ ವರ್ಷದಲ್ಲಿ ಸಾಮಾನ್ಯವಾಗಿ 1138 ಮಿ.ಮೀ. ಮಳೆ ಆಗುತ್ತದೆ. ಮಳೆ ಆಗುವ ಪ್ರಮಾಣ ಒಂದು ಕಡೆಯಿಂದ ಮತ್ತೊಂದು ಕಡೆ ವ್ಯತ್ಯಾಸವಾಗಿದ್ದು, ಪೂರ್ವ ಭಾಗದಲ್ಲಿ 569 ಮಿ.ಮೀ. ಗಳಷ್ಟು ಕಡಿಮೆ ಮಳೆ ಬಿದ್ದರೆ, ಪಶ್ಚಿಮ ಭಾಗದಲ್ಲಿ 4029 ರಷ್ಟು ಅಧಿಕ ಪ್ರಮಾಣದ ಮಳೆ ಆಗುತ್ತದೆ. ರಾಜ್ಯದ ಸುಮಾರು 2/3 ರಷ್ಟು ಭೌಗೋಳಿಕ ಪ್ರದೇಶದಲ್ಲಿ 750 ಮಿ.ಮೀ. ಗಿಂತ ಕಡಿಮೆ ಮಳೆ ಬೀಳುತ್ತದೆ. ರಾಜ್ಯದಲ್ಲಿ ಮಳೆ ಸುನಿಶ್ಚಿತವಾದ ಪ್ರದೇಶಗಳಲ್ಲೂ ಸಹ ಕೆಲವು ವರ್ಷಗಳಿಂದ ಮಳೆಯ ತೀವ್ರ ಅಭಾವ ಎದುರಾಗುತ್ತದೆ.

15. ಕಾಲಕಾಲಕ್ಕೆ ಹವಾಮಾನದ ನಿಖರ ಮಾಹಿತಿಯನ್ನು ಪಡೆಯಲು ರಾಜ್ಯದ ಪ್ರಮುಖ 3 ಸ್ಥಳಗಳಲ್ಲಿ ಅಂದರೆ 1. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ 2. ಶೊರಾಪುರ (ಸುರಪುರ ಯಾದಗಿರಿ ಜಿಲ್ಲೆ) 3. ಗದಗ ನಲ್ಲಿ ರಡಾರ್ಗಳನ್ನು ಸ್ಥಾಪಿಸುವ ಮೂಲಕ ಮೋಡಗಳ ಅಧ್ಯಯನ ಮಾಡಲು ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮೋಡ ಬಿತ್ತನೆ ಜಾರಿಗೊಳಿಸಲಾಗುವುದು. ರಾಡಾರ್ಗಳ ಸ್ಥಾಪನೆಯ ಕಾರ್ಯ ಪ್ರಾರಂಭವಾಗಿದ್ದು ಇನ್ನು 2-3 ದಿನಗಳಲ್ಲಿ ಈ ರಾಡಾರ್ಗಳ ಕಾರ್ಯಾಚರಣೆ  ಪ್ರಾರಂಭವಾಗಲಿದೆ

Facebook Comments

Sri Raghav

Admin