ಯಾಕಣ್ಣಾ..ಅಮಿತ್ ಷಾ ಬಂದಿದ್ದಾರೆ ಅಂತ ಗೊತ್ತಿದ್ರೂ, ಸರ್ವಪಕ್ಷ ಸಭೆ ಕರೆದಿದ್ದೀರಾ..?

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Siddaramaiah--01

ಬೆಂಗಳೂರು, ಆ.14-ಯಾಕಣ್ಣಾ… ಅಮಿತ್ ಷಾ ಬಂದಿದ್ದಾರೆ ಅಂತ ಗೊತ್ತಿದ್ರೂ, ಸರ್ವಪಕ್ಷ ಸಭೆ ಕರೆದಿದ್ದೀರಾ? ಹೀಗೆಂದು ಸರ್ವಪಕ್ಷ ಸಭೆಗೂ ಮುನ್ನ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದರು. ಕಾವೇರಿ, ಮಹದಾಯಿ ವಿಷಯವಾಗಿ ಸರ್ವಪಕ್ಷ ಸಭೆಗೂ ಮುನ್ನ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಒಂದು ದಿನ ಆದ್ಮೇಲೆ ಸಭೆ ಕರೆಬಹುದಿತ್ತಲ್ಲ ಅಣ್ಣಾ… ಎಂದರು.

ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಕೂಡ ಕೆ.ಎಸ್.ಈಶ್ವರಪ್ಪಗೆ ಸಾಥ್ ಕೊಟ್ಟರು. ಆಗ ಮಾತನಾಡಿದ ಸಿದ್ದರಾಮಯ್ಯ, ಹೇ… ಆ ರೀತಿ ಏನ್ ಇಲ್ರಪ್ಪ… ಈ ಹಿಂದೆ ದಿನಾಂಕ ನಿಗದಿ ಮಾಡಲಾಗಿತ್ತು. ಅದರಂತೆ ಕರೆದಿದ್ದೀವಿ ಎಂದರು. ಓಹೋ… ಇದ್ರಲ್ಲೂ ನೀವ್ ರಾಜಕಾರಣ ಮಾಡ್ತೀರಾ … ಎಂದು ಈಶ್ವರಪ್ಪ ಸಿಎಂ ಕಾಲೆಳೆದರು. ಬಳಿಕ ಉಭಯ ನಾಯಕರೂ ನಕ್ಕು ಸುಮ್ಮನಾದರು.

Facebook Comments

Sri Raghav

Admin