ವರುಣನ ಆರ್ಭಟದಿಂದ ಅಸ್ಸಾಂ-ಬಿಹಾರದಲ್ಲಿ 110 ಮಂದಿ ಸಾವು, 22 ಲಕ್ಷ ಮಂದಿ ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Assam-Rain--01

ನವದೆಹಲಿ,ಆ.14- ಅಸ್ಸಾಂ ಮತ್ತು ಬಿಹಾರದಲ್ಲಿ ಉಂಟಾಗಿರುವ ಭಾರೀ ಮಳೆ ಮತ್ತು ಪ್ರವಾಹದಲ್ಲಿ ಈವರೆಗೂ ಸುಮಾರು 110 ಜನರು ಸಾವನ್ನಪ್ಪಿದ್ದು, ಸುಮಾರು 22 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ .  ಅಸ್ಸಾಂ ಮತ್ತು ಬಿಹಾರದ ಒಟ್ಟು 21 ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು, ನಿನ್ನೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅದರೊಂದಿಗೆ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 110ಕ್ಕೇರಿದ್ದು, 22.5 ಲಕ್ಷ ಮಂದಿ ಸೂರು ಕಳೆದುಕೊಂಡಿದ್ದಾರೆ. ಈ ವರ್ಷ ಅಸ್ಸಾಂನಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 99ಕ್ಕೇರಿಕೆಯಾಗಿದೆ.

ಬ್ರಹ್ಮಪುತ್ರ ಸೇರಿದಂತೆ ಎಲ್ಲ 10 ನದಿಗಳೂ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಏತನ್ಮಧ್ಯೆ ಸತತವಾಗಿ ಸುರಿಯುತ್ತಿರುವ ಮಳೆ ಕೂಡ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದು, ಪ್ರವಾಹದ ಮಟ್ಟ ಏರಿಕೆಯಾಗತೊಡಗಿದೆ. ಪ್ರಮುಖ ಪ್ರವಾಸಿ ತಾಣಗಳಾದ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ, ಪೊಬಿಟೋರಾ ವನ್ಯಜೀವಿ ಅಭಯಾರಣ್ಯ ಮತ್ತು ಲಾಖುವಾ ವನ್ಯಜೀವಿ ಅಭಯಾರಣ್ಯಗಳು ದ್ವೀಪಗಳಾಗಿ ಮಾರ್ಪಟ್ಟಿದ್ದು, ಅಸ್ಸಾಂನಮ ದುಬ್ರಿಯಲ್ಲಿ ಅತೀ ಹೆಚ್ಚು ಅಂದರೆ 3.98 ಲಕ್ಷ ಮಂದಿ ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೊರಿಗಾಂನಲ್ಲಿ ಒಟ್ಟು 3.14 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಇನ್ನು ಅಸ್ಸಾಂ ಮತ್ತು ಬಿಹಾರದಲ್ಲಿ ಸುಮಾರು 22 ರೈಲುಗಳ ಸಂಚಾರ ಸ್ಥಗಿತವಾಗಿದ್ದು, 14ಕ್ಕೂ ವಿವಿಧ ನಿಲ್ದಾಣಗಳಲ್ಲಿ ರೈಲು ಸೇವೆ ಅಸ್ತವ್ಯಸ್ಥಗೊಂಡಿದೆ.
ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಲï ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರದಿ ನೀಡಲಿದ್ದಾರೆ.

ನೇಪಾಳದಲ್ಲಿ ಭಾರೀ ಪ್ರವಾಹ, 50 ಬಲಿ:

ಹಿಮಾಲಯ ರಾಷ್ಟ್ರ ನೇಪಾಳದ ರಾಜಧಾನಿ ಕಟ್ಮಂಡು ಸೇರಿದಂತೆ ವಿವಿಧೆಡೆ ಭಾರೀ ಮಳೆ ಮತ್ತು ಪ್ರವಾಹದಿಂದ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು , ಕೆಲವರು ಕಣ್ಮರೆಯಾಗಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗಿದೆ.

Facebook Comments

Sri Raghav

Admin