ಶಂಕಿತ ಬಂಡುಕೋರರಿಂದ ಟರ್ಕಿ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ, 17 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Turky-attack
ಔವುವಾಗಾಡೌಗು, ಆ.14- ಶಂಕಿತ ಬಂಡುಕೋರರು ಟರ್ಕಿ ರೆಸ್ಟೋರೆಂಟ್ ಒಂದರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 17 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಬುರ್ಕಿನಾ ಫಾಸೋದ ರಾಜಧಾನಿಯಲ್ಲಿ ಇಂದು ಮುಂಜಾನೆ ನಡೆದಿದೆ.   ವಿದೇಶಿಯರು ಭೇಟಿ ನೀಡುವ ಜನಪ್ರಿಯ ರೆಸ್ಟೋರೆಂಟ್ ಮೇಲೆ ಕಳೆದ ಎರಡು ವರ್ಷಗಳಲ್ಲಿ ನಡೆದ ಎರಡನೇ ಭೀಕರ ದಾಳಿ ಇದಾಗಿದೆ.  ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿ ಮನಸೋಇಚ್ಛೆ ಗುಂಡು ಹಾರಿಸಿದರು. ನಂತರ ಅಲ್ಲಿ ಕೆಲಕಾಲ ಗುಂಡಿನ ಚಕಮಕಿ ನಡೆಯಿತು ಎಂದು ಸಂವಹನ ಸಚಿವ ರೆಮಿ ಡ್ಯಾಂಡ್‍ಜಿನೌ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೆಸ್ಟೋರೆಂಟ್ ಮೇಲೆ ನಡೆದ ಆಕ್ರಮಣದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು, ಇತರ ಎಂಟು ಜನ ಗಾಯಗೊಂಡಿದ್ದಾರೆ. ಮೃತರೆಲ್ಲರೂ ವಿವಿಧ ದೇಶಗಳ ಪ್ರಜೆಗಳಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಅಜಿಜಿ ಇಸ್ತಾನ್‍ಬುಲ್ ರೆಸ್ಟೋರೆಂಟ್‍ನಲ್ಲಿ ದಾಳಿ ಮತ್ತು ಗುಂಡಿನ ಮೊರೆತ ಕೇಳುತ್ತಿದ್ದಂತೆ ಭದ್ರತಾ ಪಡೆಗಳು ತಕ್ಷಣ ಅಲ್ಲಿಗೆ ಧಾವಿಸಿದಾಗ ಗುಂಡಿನ ಚಕಮಕಿ ನಡೆಯಿತು. ನಂತರ ಭಯೋತ್ಪಾದಕರು ಪರಾರಿಯಾದರು.   2016ರ ಜನವರಿಯಲ್ಲಿ ಮತ್ತೊಂದು ಕೆಫೆ ಮೇಲೆ ಉಗ್ರರು ದಾಳಿ ನಡೆಸಿ 30 ಜನರನ್ನು ಕೊಂದು ಅನೇಕರನ್ನು ಗಾಯಗೊಳಿಸಿದ್ದರು.  ಅಲ್-ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಈ ಕೃತ್ಯ ಎಸಗಿರುವ ಶಂಕೆ ಇದೆ.

 

Facebook Comments

Sri Raghav

Admin