ಸರ್ವಪಕ್ಷ ಸಭೆಯಲ್ಲಿ ಈಶ್ವರಪ್ಪ – ಎಸ್.ಆರ್.ಪಾಟೀಲ್ ನಡುವೆ ಟಾಕ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

All-Party-Meeting--0102

ಬೆಂಗಳೂರು, ಆ.14-ಮಹದಾಯಿ ವಿವಾದ ಸಂಬಂಧ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಹದಾಯಿ ವಿವಾದವನ್ನು ಈ ಹಿಂದಿನ ಪ್ರಧಾನಿಯವರೇ ಬಗೆಹರಿಸಬಹುದಿತ್ತು. ಈಗ ಪ್ರಧಾನಿಯವರ ಮಧ್ಯಸ್ಥಿಕೆಗೆ ಕಾಂಗ್ರೆಸ್‍ನವರು ಆಗ್ರಹಿಸುತ್ತಿದ್ದಾರೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ ಮಾತಿಗೆ ಕೆಂಡಾಮಂಡಲವಾದ ಎಸ್.ಆರ್.ಪಾಟೀಲ್, ಕೇವಲ ಹಿಂದಿನ ವಿಷಯವನ್ನೇ ಏಕೆ ಮಾತನಾಡುತ್ತೀರಿ. ಈಗ ನೀವು ಏನು ಮಾಡುತ್ತೀರ ಎಂಬುದನ್ನು ಹೇಳಿ. ಮೂರು ವರ್ಷಗಳಾಯಿತು ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು. ಎರಡು ವರ್ಷಗಳಿಂದ ನಮ್ಮ ಭಾಗದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ.

ಪ್ರಧಾನಿ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಯುತ್ತದೆ. ಅದಕ್ಕಾಗಿ ಆಗ್ರಹಿಸುತ್ತಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ. ಕಳಸ-ಬಂಡೂರಿಗೆ ಅನುಮತಿಯನ್ನೇ ಪಡೆದಿಲ್ಲ ಎಂಬ ಮಾತಿದೆ ಎಂದು ಹೇಳಿದಾಗ, ಬಂಡೂರಿಯೋಜನೆಗೆ 40 ಕೋಟಿ, ಕಳಸಾ ಯೋಜನೆಗೆ 49 ಕೋಟಿ ರೂ. ಯೋಜನೆಗೆ 2002ರ ವಾಜಪೇಯಿ ಅವರಆಡಳಿತದಲ್ಲೇ ಅನುಮತಿ ಪಡೆಯಲಾಗಿತ್ತು. ಈಗ ಯೋಜನೆಯ ವೆಚ್ಚ ಹೆಚ್ಚಾಗಿದೆ. ಅದಕ್ಕಾಗಿ ನಾವು ಅನುಮತಿ ಕೋರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ 1200 ಎಕರೆ ಭೂಮಿಯನ್ನು ರೈತರು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಮುಂದಾಗಿದ್ದಾರೆ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ವೇದಿಕೆ ಸಿದ್ಧವಾಗಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ಶಿವಕುಮಾರ್ ಉದಾಸಿ ಸೇರಿದಂತೆ ಗದಗ, ಬಾಗಲಕೋಟೆ, ಧಾರವಾಡ, ವಿಜಯಪುರ ಜಿಲ್ಲೆಗಳ ಶಾಸಕರು, ಸಂಸದರು ವಿಧಾನಪರಿಷತ್ ಸದಸ್ಯರು,ಹೋರಾಟಗಾರರ ಸಂಘದ ಮುಖಂಡರು ಪಾಲ್ಗೊಂಡಿದ್ದರು.

Facebook Comments

Sri Raghav

Admin