ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

High-Alert--01

ನವದೆಹಲಿ,ಆ.14- ಎಪತ್ತೊಂದನೇ ಸ್ವಾತಂತ್ರ್ಯದಿನಾಚರಣೆಗೆ ದೇಶ ಸಜ್ಜಾಗುತ್ತಿರುವಾಗಲೇ ಭಯೋತ್ಪಾದಕರಿಂದ ನಡೆಯಬಹುದಾದ ಯಾವುದೇ ದಾಳಿಯನ್ನು ಎದುರಿಸಲು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಭಾರೀ ಬಂದೋಬಸ್ತ್ ಮಾಡಲಾಗಿದೆ. ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ನಾಳೆ ನಡೆಯಲಿರುವ ಸ್ವಾತಂತ್ರ್ಯೋತ್ಸವ ಪಥಸಂಚಲನಕ್ಕಾಗಿ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶ-ವಿದೇಶಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು , ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಕೆಂಪುಕೋಟೆ ಸುತ್ತಮುತ್ತ ಪ್ರದೇಶಗಳಲ್ಲಿ ಇಂದಿನಿಂದಲೇ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದ್ದು , ಹೆಚ್ಚಿನ ಸಂಖ್ಯೆ ಕಮಾಂಡೊಗಳು, ಶಾರ್ಪ್ ಶೂಟರ್‍ಗಳನ್ನು ನಿಯೋಜಿಸಲಾಗಿದೆ. ಪಥಸಂಚಲನ ನಡೆಯುವ ಮಾರ್ಗದ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲು ಹೆಲಿಕಾಪ್ಟರ್ ಮತ್ತು ಡ್ರೋಣ್ ಪಹರೆಯನ್ನು ಹಾಕಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಗಳಲ್ಲಿ ಭಯೋತ್ಪಾದಕರ ಉಪಟಳ ಮತ್ತು ಒಳನುಸುಳಿವಿಕೆ ಯತ್ನ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಜಮ್ಮುಕಾಶ್ಮೀರ, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವ್ಯಾಪಕ ಭದ್ರತಾ ಏರ್ಪಾಡು ಕೈಗೊಳ್ಳುವಂತೆ ಸೂಚನೆ ನೀಡಿದೆ.

Facebook Comments

Sri Raghav

Admin