38 ಶತಕೋಟಿ ರೂ. ಮೊತ್ತದ ಬಿಲ್ ಕರೆಂಟ್ ಬಿಲ್ ನೋಡಿ ಜಾರ್ಖಂಡ್ ವ್ಯಕ್ತಿಗೆ ‘ಶಾಕ್’..!

electric-bill
ಜಾರ್ಖಂಡ್, ಆ. 14- ಸಾಮಾನ್ಯವಾಗಿ ಒಂದು ಮಧ್ಯಮ ವರ್ಗದ ಕುಟುಂಬದ ಎಲೆಕ್ಟ್ರಿಕ್ ಬಿಲ್ ಅಬ್ಬಬ್ಬಾ 1000 ರೂ.ಗಳನ್ನು ಮುಟ್ಟಬಹುದೇನೋ..! ಆದರೆ ಜಾರ್ಖಂಡ್‍ನ ವ್ಯಕ್ತಿಯೊಬ್ಬರ ಕೈಗೆ 38 ಶತಕೋಟಿ ರೂ. ಮೊತ್ತದ ಬಿಲ್ ಬರುವ ಮೂಲಕ ಶಾಕ್ ನೀಡಿದೆ…! ಅರೆ ಇದು ಎಷ್ಟೋ ವರ್ಷಗಳ ವಿದ್ಯುತ್ ಬಿಲ್‍ನ ಮೊತ್ತವಲ್ಲ ಕೇವಲ ಒಂದೇ ತಿಂಗಳ ಬಿಲ್ ಎಂದು ತಿಳಿದು ಸ್ಥಳೀಯರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರಷ್ಟೇ ಅಲ್ಲ ಬಿಲ್ ಮೊತ್ತವನ್ನು ಕಟ್ಟಿಲ್ಲವೆಂದು ಜಾರ್ಖಂಡ್ ವಿದ್ಯುತ್‍ಚ್ಛಕ್ತಿ ಮಂಡಳಿಯು ಅವರ ನಿವಾಸಕ್ಕೆ ಒದಗಿಸಿದ್ದ ವಿದ್ಯುತ್ ಸರಬರಾಜನ್ನು ಕೂಡ ಕಡಿತಗೊಳಿಸಿದ್ದಾರೆ.

ಈ ಕುರಿತು ಮಾತನಾಡಿದ ಮನೆಯ ಮಾಲೀಕ ಬಿ.ಆರ್. ಗುಹಾ ಅವರು ನನಗೆ ಈ ಎಲೆಕ್ಟ್ರಿಕ್ ಬಿಲ್ ಅನ್ನು ನೋಡಿ ಆಶ್ಚರ್ಯವಾಯಿತು. ನಮ್ಮ ಮನೆಯಲ್ಲಿರುವುದು ಕೇವಲ 3 ಕೋಣೆಗಳು , ಅಷ್ಟಕ್ಕೂ ನಾವು ಬಳಸುತ್ತಿರುವುದು 3 ಟುಬ್‍ಲೈಟ್, ಮೂರು ಫ್ಯಾನ್ ಹಾಗೂ ಟಿವಿ ಮಾತ್ರ ಇಷ್ಟಕ್ಕೇ ಈ ದಾಖಲೆ ಮೊತ್ತದ ಬಿಲ್ಲೇ ಎಂದು ಪ್ರಶ್ನಿಸಿದ್ದಾರೆ.  ಗುಹಾರ ಪುತ್ರಿ ರತ್ನಾ ಬಿಸ್ವಾಸ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪೋಷಕರ ಆರೋಗ್ಯ ಸರಿಯಿಲ್ಲ ಹೀಗಿರುವಾಗ 38 ಬಿಲಿಯನ್ ಎಲೆಕ್ಟ್ರಿಕ್ ಬಿಲ್ ಅನ್ನು ನೋಡಿ ಅವರು ವಿಚಲಿತಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಜಾರ್ಖಂಡ್ ಎಲೆಕ್ಟ್ರಿಸಿಟಿ ಬೋರ್ಡ್ (ಜೆಇಬಿ) ವಿರುದ್ಧ ಗುಹಾ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Facebook Comments