ಗುರುರಾಜ್‍ಗೆ ಚಾಕು ಇರಿದ ರಿಯಲ್ ಎಸ್ಟೇಟ್ ಏಜೆಂಟ್‍ಗಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Gururaj--001

ಬೆಂಗಳೂರು,ಆ.15-ಚಿತ್ರನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಓವರ್‍ಟೇಕ್ ಮಾಡಿಕೊಂಡು ಮುನ್ನುಗ್ಗಿದ ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೆ ಅವರೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿ ರಿಯಲ್ ಎಸ್ಟೇಟ್ ಏಜೆಂಟ್ ಎಂಬುದು ಗೊತ್ತಾಗಿದ್ದು , ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ನಿನ್ನೆಯ ಘಟನೆ ಆಕಸ್ಮಿಕ. ಆರೋಪಿ ಬಂಧನಕ್ಕಾಗಿ ತಂಡ ರಚಿಸಲಾಗಿದೆ. ಈ ತಂಡ ಶೋಧ ಕೈಗೊಂಡಿದ್ದು , ಶೀಘ್ರ ಬಂಧಿಸುವುದಾಗಿ ಹಿರಿಯ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ನಿನ್ನೆ ಬೆಳಗ್ಗೆ ಆರ್.ಟಿ.ನಗರದ ಮಠದಹಳ್ಳಿ ಮೈದಾನ ರಸ್ತೆಯಲ್ಲಿ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರು ಕಾರಿನಲ್ಲಿ ಮಗುವನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಹಿಂದಿನಿಂದ ಓವರ್ ಟೇಕ್ ಮಾಡಿಕೊಂಡು ಮುನ್ನುಗ್ಗಿದ ಕಾರು ಗುರುರಾಜ್ ಅವರ ಕಾರಿಗೆ ತಾಗಿದೆ.  ಸ್ವಲ್ಪ ಮುಂದೆ ಹೋಗಿ ಕಾರು ನಿಲ್ಲಿಸಿ ಇದನ್ನು ಪ್ರಶ್ನಿಸುತ್ತಿದ್ದಂತೆ ಗುರುರಾಜ್ ಜೊತೆ ಜಗಳ ತೆಗೆದ ಆರೋಪಿ ಚಾಕುವಿನಿಂದ ಅವರ ತೊಡೆಗೆ ಇರಿದು ಪರಾರಿಯಾಗಿದ್ದಾನೆ.   ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಟಿ.ನಗರ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದು , ಶೋಧ ಮುಂದುವರೆಸಿದ್ದಾರೆ.

Facebook Comments

Sri Raghav

Admin