ಜಸ್ಟ್ ಮಿಸ್, ಹೆಬ್ಬಾವಿನಿಂದ ಪಾರಾದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Hebbavu--01

ಚನ್ನಪಟ್ಟಣ, ಆ.15- ಸೀಮೆಹುಲ್ಲು ಕತ್ತರಿಸುತ್ತಿದ್ದ ರೈತನೋರ್ವ ಕೆಲವೇ ಕ್ಷಣದಲ್ಲಿ ಭಾರೀ ಗಾತ್ರದ ಹೆಬ್ಬಾವಿನಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಕೋಡಿಹೊಸಹಳ್ಳಿಯಲ್ಲಿ ನಡೆದಿದೆ. ಪಿ.ಹಳ್ಳಿದೊಡ್ಡಿ ಮುನಿಸ್ವಾಮಣ್ಣ ಎಂಬುವರ ತೋಟದಲ್ಲಿ ಸೀಮೆ ಹುಲ್ಲು ಕತ್ತರಿಸುವಾಗ ಮೊಲ ಹಿಡಿದು ನುಂಗುತ್ತಿದ್ದ ಹೆಬ್ಬಾವು ಹಠಾತ್ ದಾಳಿ ನಡೆಸಿದೆ.  ಆದರೆ, ಹೆಬ್ಬಾವು ಮೊಲವನ್ನು ಅರ್ಧಕ್ಕೆ ನುಂಗಿದ್ದರಿಂದ ಅದೃಷ್ಟವಶಾತ್ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಕೂಗಿಕೊಂಡಾಗ ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾರೆ. ನಂತರ ಕನಕಪುರದಿಂದ ಹಾವು ಹಿಡಿಯುವರೋರ್ವರನ್ನು ಕರೆಯಿಸಿ ಹೆಬ್ಬಾವು ಹಿಡಿಸಿದ್ದಾರೆ. ಸುಮಾರು 10 ರಿಂದ 12 ಅಡಿ ಉದ್ದವಿರುವ ಹೆಬ್ಬಾವಾಗಿದ್ದು ಸುಮಾರು 50 ರಿಂದ 60 ಕೆ.ಜಿ. ತೂಕವಿತ್ತೆಂದು ಹೇಳಲಾಗಿದೆ.

ಗ್ರಾಮದ ಸೀಮೆ ಹುಲ್ಲು ಪಾತಿಯಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿರುವುದರ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ತಂಡೋಪತಂಡವಾಗಿ ಬಂದು ಹೆಬ್ಬಾವನ್ನು ವೀಕ್ಷಿಸಿದ್ದಾರೆ. ಹೆಬ್ಬಾವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.

Facebook Comments

Sri Raghav

Admin