ಟಿಕೆಟ್ ಪಕ್ಕಾ ಎಂದುಕೊಂಡಿದ್ದ ಬಿಜೆಪಿ ಹಾಲಿ-ಮಾಜಿ ಶಾಸಕರಿಗೆ ಕಾದಿದೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ಬೆಂಗಳೂರು, ಆ.15-ಮಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಟಿಕೆಟ್ ಖಚಿತ ಎಂದುಕೊಂಡಿದ್ದ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರಿಗೆ ಶಾಕ್ ಕಾದಿದೆ. ವರ್ಚಸ್ಸಿಲ್ಲದವರಿಗೆ ಟಿಕೆಟ್ ಇಲ್ಲ ಎನ್ನುವ ಸುಳಿವು ನೀಡುವ ಮೂಲಕ ಆಕಾಂಕ್ಷಿಗಳಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಹೌದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ ಎನ್ನುವ ಗುಟ್ಟನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಟ್ಟುಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕಲು ಷಾ ನಿರ್ಧಾರ ಕೈಗೊಂಡಿದ್ದು, ಶೇ. 60 ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲು ಷಾ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.

ವೈದ್ಯಕೀಯ, ವಕೀಲ ವೃತ್ತಿ, ರಾಜಕೀಯ ನಾಯಕರ ಆಪ್ತ ಸಹಾಯಕರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಇರುವ ಪ್ರಭಾವಿಗಳಿಗೆ ಟಿಕೆಟ್ ನೀಡಲು ಷಾ ತಂತ್ರಗಾರಿಕೆ ರೂಪಿಸುತ್ತಿದ್ದು, ಸಂಘ ಪರಿವಾರದ ಸಂಪರ್ಕವಿರುವ ಮತ್ತು ಸಮಾಜದಲ್ಲಿ ವರ್ಚಸ್ಸಿರುವ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎನ್ನಲಾಗಿದೆ.  ಅಚ್ಚರಿ ಎಂದರೆ ಹಾಲಿ ಎಲ್ಲ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದ್ದು, ಇನ್ನು ಮಾಜಿ ಶಾಸಕರಿಗಂತೂ ಬಿಜೆಪಿ ಟಿಕೆಟ್ ಮರೀಚಿಕೆ ಎನ್ನಬಹುದು ಎನ್ನಲಾಗಿದೆ.

ಉತ್ತರ ಪ್ರದೇಶ ಮಾದರಿಯಲ್ಲಿ ಟಿಕೆಟï ಹಂಚಲು ಷಾ ನಿರ್ಧರಿಸಿದ್ದಾರೆ. ಇಂದಿನ ಸಂಘ ಪರಿವಾರದ ಮುಖಂಡರ ಸಭೆಯಲ್ಲಿ ಈ ಗುಟ್ಟನ್ನು ಬಿಟ್ಟುಕೊಟ್ಟಿದ್ದು ಷಾ ರಾಜ್ಯ ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಠಿಯಾಗುವಂತೆ ಮಾಡಿದ್ದಾರೆ.

Facebook Comments

Sri Raghav

Admin