ಫಲಪುಷ್ಪ ಪ್ರದರ್ಶನ ನೋಡಲು ಲಾಲ್‍ಬಾಗ್‍ಗೆ ಹರಿದು ಬಂದ ಜನಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Lalbhag--01
ಬೆಂಗಳೂರು,ಆ.15-ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಇಂದು ಕೊನೆಯ ದಿನವಾದ ಹಿನ್ನಲೆಯಲ್ಲಿ ಜನ ಸಾಗರವೇ ಹರಿದುಬಂದಿತು. 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಕವಿಶೈಲ ನೋಡಿ ಲಕ್ಷಾಂತರ ಜನ ಕಣ್ತುಂಬಿಸಿಕೊಂಡರು.

ಫಲಪುಷ್ಪ ಪ್ರದರ್ಶನದ ಕೊನೆಯ ದಿನ ಹಾಗೂ ಸ್ವಾತಂತ್ರ್ಯೋತ್ಸವದ ಸರ್ಕಾರಿ ರಜಾ ಇದುದ್ದರಿಂದ ಬೆಳಗ್ಗೆಯಿಂದಲೇ ಶಾಲಾಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರು, ಸರ್ಕಾರಿ ನೌಕರರು, ಉದ್ಯಮಿಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದರು.  ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪ್ರದರ್ಶನಕ್ಕೆ ಜನರು ಆಗಮಿಸುವುದು ಕಡಿಮೆ ಎಂದೇ ಭಾವಿಸಿದ್ದೆವು. ಆದರೆ ಬೆಳಗ್ಗೆಯಿಂದಲೇ ಇಷ್ಟೊಂದು ಜನ ನೆರೆದಿರುವುದು ಸಂತೋಷವಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಜಗದೀಶ್ ತಿಳಿಸಿದರು.

lalbhag--02

ಭಾನುವಾರದಂದು ದಾಖಲೆ ಮಟ್ಟದಲ್ಲಿ ಜನ ಸಾಗರವೇ ಹರಿದುಬಂದಿದ್ದರಿಂದ ಒಂದೇ ದಿನದಲ್ಲೇ 45 ಲಕ್ಷ ಹಣ ಸಂಗ್ರಹವಾಗಿತ್ತು. ಇಂದು ಕೂಡ ಅದೇ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ ಎಂದರು.  ಆ.4ರಿಂದ 15ರವರೆಗೆ 12 ದಿನಗಳ ಕಾಲ ನಡೆದ ಈ ಫಲಪ್ರದರ್ಶನದಲ್ಲಿ ಸುಂದರ ಹೂದೋಟಗಳ ಮಧ್ಯೆ ರಾಷ್ಟ್ರಕವಿ ಕುವೆಂಪು ಅವರ 200 ವರ್ಷ ಹಳೆಯದಾದ ತೊಟ್ಟಿ ಮನೆ, ಬಾಲ್ಯದ ವಿವಿಧ ಭಾವಚಿತ್ರಗಳು ಹೆಚ್ಚು ಆಕರ್ಷಣೀಯವಾಗಿತ್ತು.  ಕುವೆಂಪು ಅವರ ಮನೆ ಮತ್ತು ಕವಿಶೈಲ ಸಮಾಧಿ ಸ್ಥಳ, ಲಾಲ್‍ಬಾಗ್‍ನಲ್ಲಿ ಪ್ರತಿಕೃತಿಗಳು ಅದ್ಭುತವಾಗಿ ಮೂಡಿ ಬಂದಿದೆ ಎಂದು ಪ್ರವಾಸಿಗ ಸತೀಶ್ ಹೇಳಿದರು.

Lalbhag--03

ಕುವೆಂಪು ಅವರ ಸಂದೇಶಗಳು ಜಗತ್ತಿನಾದ್ಯಂತ ಪಸರಿಸಲಿ ಎಂದು ಕುವೆಂಪು ಪ್ರತಿಷ್ಠಾನ ಮತ್ತು ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಈ ಪ್ರದರ್ಶನ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಜಗದೀಶ್ ತಿಳಿಸಿದರು.  ಈ ಬಾರಿಯ ಫಲಪುಪ್ಪ ಪ್ರದರ್ಶನಕ್ಕೆ ಖ್ಯಾತ ಸಾಹಿತಿಗಳು, ಗಣ್ಯರು, ಸಾರ್ವಜನಿಕರು, ದೇಶ-ವಿದೇಶದ ಪ್ರವಾಸಿಗರು ಭೇಟಿ ನೀಡಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.

Facebook Comments

Sri Raghav

Admin