ಬೆಂಗಳೂರಿನ ಯಾವ ಭಾಗದಲ್ಲಿ ಎಷ್ಟು ಮಳೆ ಬಿದ್ದಿದೆ, ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Car--1

ಬೆಂಗಳೂರು, ಆ.15-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ತಮಿಳುನಾಡಿಗೆ ಹೊಂದಿಕೊಂಡಂತಿರುವ ರಾಜ್ಯದ ಕನಕಪುರ, ಚಾಮರಾಜನಗರ, ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾದ ವರದಿಯಾಗಿದೆ. ನಿನ್ನೆ ತಡರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾದ ಮಳೆ ಬೆಳಗ್ಗೆ 8 ಗಂಟೆಯವರೆಗೆ ನಿರಂತರವಾಗಿ ಸುರಿಯುತ್ತಿತ್ತು. ಈ ವರ್ಷದಲ್ಲೇ ಅತ್ಯಧಿಕ ಪ್ರಮಾಣದ ಮಳೆ ಬೆಂಗಳೂರಿನಲ್ಲಿ ಬಿದ್ದಿದೆ.

ನಗರದ ಬನ್ನೇರುಘಟ್ಟ ರಸ್ತೆಯ ಬಿಳೇಕಳ್ಳಿಯಲ್ಲಿ 182 ಮಿ.ಮೀಟರ್‍ನಷ್ಟು ಭಾರೀ ಮಳೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

ಮಿಲಿಮೀಟರ್‍ನಲ್ಲಿ:
ಸಂಪಂಗಿರಾಮನಗರದಲ್ಲಿ 150.5, ದೇವಸಂದ್ರ 50.5, ವರ್ತೂರು 47, ಹೊರಮಾವು 60.5, ಬೆಳ್ಳಂದೂರು 90, ಕೆಆರ್‍ಪುರ 45, ಗರುಡಾಚಾರ್‍ಪಾಳ್ಯ 62.5, ವಿಜಿನಾಪುರ 112.5, ರಾಜರಾಜೇಶ್ವರಿನಗರ 65, ಕೆ.ಜಿ.ಹಳ್ಳಿ 53,ಬಸವನಗುಡಿ 97.5, ಸಾರಕ್ಕಿ 132.5, ನಾಗರಬಾವಿ 33.5, ಅಂಜನಾಪುರ 91, ದೊಡ್ಡನೆಕ್ಕುಂದಿ 69, ಎಚ್‍ಎಎಲ್ ಏರ್ಪೋರ್ಟ್  122.5, ಶಾಂತಿನಗರ 105.5, ಮನೋರಾಯನಪಾಳ್ಯ 71.5, ಪುಲಕೇಶಿನಗರ 74, ದೊಮ್ಮಲೂರು 82, ಕುಮಾರಸ್ವಾಮಿ ಲೇಔಟ್ 120, ವಿಶ್ವೇಶ್ವರಪುರಂ 125, ವಿದ್ಯಾಪೀಠ 85.5, ಕೋರಮಂಗಲ 140, ಲಕ್ಕಸಂದ್ರ 136.5, ಹಂಪಿನಗರ 45.5, ಕೆಂಗೇರಿ 44.5, ಹೆಮ್ಮಿಗೆಪುರ 95.5, ಎಚ್‍ಬಿಆರ್ ಲೇಔಟ್ 60.5, ಹೊಯ್ಸಳನಗರ 97.5, ಬೆನ್ನಿಗಾನಹಳ್ಳಿ 57, ಕುಶಾಲ್‍ನಗರ 65, ಕಮ್ಮನಹಳ್ಳಿ 61.5, ಮಾರತ್‍ಹಳ್ಳಿ 37.5, ಅಂಜನಾಪುರ 91, ರಾಮನಹಳ್ಳಿ 115.5, ಕೋಣನಕುಂಟೆ 130, ಎಚ್‍ಎಸ್‍ಆರ್ ಲೇಔಟ್ 125, ಉತ್ತರಹಳ್ಳಿ 75.5, ಬೇಗೂರು 81,ರಾಜ್‍ಮಹಲ್ ಗುಟ್ಟಹಳ್ಳಿ 85.5 ಮಿಲಿ ಮೀಟರ್‍ನಷ್ಟು ಭಾರೀ ಮಳೆಯಾಗಿದ್ದು, ಬೆಂಗಳೂರು ಉತ್ತರ ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ ಎಂದು ಹೇಳಿದರು.

ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಹವಾ ಮುನ್ಸೂಚನೆ ಪ್ರಕಾರ ಇದೇ ರೀತಿ ಮಳೆ ಸಂಜೆ ಅಥವಾ ರಾತ್ರಿ ವೇಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಿದರು.

Facebook Comments

Sri Raghav

Admin