ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪರಿಂದ ಧ್ವಜಾರೋಹಣ

ಈ ಸುದ್ದಿಯನ್ನು ಶೇರ್ ಮಾಡಿ

Mandya--01

ಮಂಡ್ಯ, ಆ.15- ಅನೇಕ ಹಿರಿಯರ ತ್ಯಾಗ-ಬಲಿದಾನಗಳಿಂದ ದೇಶಭಕ್ತಿಯ ಪರಿಣಾಮವಾಗಿ ನಾವಿಂದು ಸ್ವಾತಂತ್ರ್ಯವೆಂಬ ಸ್ವರ್ಗದಲ್ಲಿದ್ದೇವೆ. ಈ ಪವಿತ್ರ ದಿನದಂದು ದೇಶಕ್ಕಾಗಿ ಬಲಿದಾನಗೈದ ಅಸಂಖ್ಯಾತ ವೀರ ಚೇತನಗಳಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹೇಳಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೋಟ್ಯಂತರ ದೇಶಭಕ್ತರ ಹೋರಾಟದ ಫಲವಾಗಿ ನಾವು ಪಡೆದುಕೊಂಡ ಸ್ವಾತಂತ್ರ್ಯಕ್ಕೀಗ 7 ದಶಕಗಳ ಇತಿಹಾಸ. ಇಷ್ಟು ವರ್ಷಗಳಲ್ಲಿ ಭಾರತ ಮೈಕೊಡವಿ ಎದ್ದು ನಿಂತು ಜಾಗತಿಕ ನಾಯಕತ್ವ ಪಡೆದುಕೊಳ್ಳುವ ಗರಿಮೆ ಹೊಂದಿದೆ ಎಂದರು.

ರಸ್ತೆ ಅಪಘಾತದಲ್ಲಿ ಸಹಾಯ ಮಾಡಿದ್ದ ಸನತ್ ಹಾಗೂ ಶಿವಪ್ಪ ಎಂಬ ನಾಗರಿಕರಿಗೆ ಜನೋಪಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಪದಕ ಪಡೆದ ಗೃಹ ರಕ್ಷಕ ದಳದ ಕಮಾಂಡೆಂಟ್ ಕೆ.ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಯಲ್ಲಿ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದ 27 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.

ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ನಗರಸಭಾ ಅಧ್ಯಕ್ಷ ಹೊಸಳ್ಳಿ ಬೋರೇಗೌಡ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಮಂಜುಶ್ರೀ, ಎಸ್‍ಪಿ ರಾಧಿಕಾ, ಜಿಪಂ ಸಿಇಒ ಶರತ್ ಇತರರು ಪಾಲ್ಗೊಂಡಿದ್ದರು.

ಮಳೆ ಅಡ್ಡಿ:

ರಾತ್ರಿಯಿಂದ ಬೆಳಗಿನವರೆಗೂ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಇನ್ನಿತರೆ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಯಿತು. ಸಾರ್ವಜನಿಕರ ಆಕರ್ಷಣೆಯಾಗಿದ್ದ ಪಥ ಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯದೆ ಇದ್ದದ್ದರಿಂದ ಮಕ್ಕಳು ನಿರಾಸೆಗೊಂಡರು. ಇನ್ನು ಸಮಾರಂಭದ ಅಧ್ಯಕ್ಷತೆ ವಹಿಸಬೇಕಾಗಿದ್ದ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಅಂಬರೀಶ್ ಪಾಲ್ಗೊಳ್ಳದೆ ಇದ್ದದ್ದು ನಾಗರಿಕರಿಗೆ ಬೇಸರ ತರಿಸಿತು.

Facebook Comments

Sri Raghav

Admin