ಸಿಕ್ಕಾಪಟ್ಟೆ ಸೆಕ್ಯೂರಿಟಿ ಇದ್ದರೂ ಭಾಷಣದ ವೇಳೆ ಮೋದಿ ಮುಂದೆ ಬಂದಿಳಿದ ಹದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

MOdi--003

ನವದೆಹಲಿ, ಆ. 15-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದೆಹಲಿಯ ಮೊಘಲ್ ಸ್ಮಾರಕ ಕೆಂಪುಕೋಟೆಯ ಮೇಲೆ ದೇಶವಾಸಿಗಳನ್ನು ಕುರಿತು ಮಾತನಾಡುತ್ತಿದ್ದ ಸಂದರ್ಭ ಎಲ್ಲಿಂದಲೋ ಬಂದ ರಣಹದ್ದೊಂದು ಮೋದಿಯವರ ಪೋಡಿಯಂ ಸಮೀಪವೇ ಇಳಿದು ಕುಳಿತು ಜನರಲ್ಲಿ ಅಚ್ಚರಿ ಮೂಡಿಸಿತು.
ಆದರೆ ಇದರಿಂದ ಮೋದಿಯವರು ಕಿಂಚಿತ್ತೂ ವಿಚಲಿತರಾಗಲಿಲ್ಲ. ಅದೂ ಆ ರಣಹದ್ದು ಬಂದಿದ್ದು, ಪ್ರಧಾನಿ ಇನ್ನೇನು ಭಾಷಣ ಮುಗಿಸುತ್ತಿದ್ದ ಸಮಯಕ್ಕೆ.

ಸುಮಾರು 9 ಸಾವಿರಕ್ಕೂ ಹೆಚ್ಚಿನ ಪೊಲೀಸರು, ಸೇನಾ ಪಡೆಯವರು ಎಲ್ಲರೂ ಸೇರಿ ನಭೂತೋ ನಭವಿಷ್ಯತಿ ಎಂಬಂತಹ ಭದ್ರತೆ ಕಲ್ಪಿಸಿದ್ದರೂ ಈ ಹದ್ದು ಹೇಗೆ ಮತ್ತು ಎಲ್ಲಿಂದ ತೂರಿ ಬಂತು ಎಂಬುದು ಈಗ ದೊಡ್ಡ ಸುದ್ದಿಯಾಗಿದೆ. ಇಡೀ ದೆಹಲಿಯಲ್ಲಿ ಒಂದು ಇರುವೆಯೂ ನುಸಿಯಲು ಸಾಧ್ಯವಾಗದಂತಹ ಭದ್ರತೆ ಏರ್ಪಡಿಸಲಾಗಿತ್ತು.

ಭೂಮಿ ಮತ್ತು ಆಕಾಶ ಮಾರ್ಗದಲ್ಲಿ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ನಿನ್ನೆಯೇ ಹೇಳಿದ್ದರು. ಜೊತೆಗೆ ನೂರಾರು ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಆದರೆ ಎಲ್ಲರ ಕಣ್ಣು ತಪ್ಪಿಸಿ ಈ ಹದ್ದು ಬಂದಿರುವುದು ಅಚ್ಚರಿ ಮೂಡಿಸಿದೆ.
ಕಾರ್ಯಕ್ರಮಕ್ಕೆ ಬರುವ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಗಣ್ಯವ್ಯಕ್ತಿಗಳು, ಸಾರ್ವಜನಿಕರು ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸುವಾಗ ಎಲ್ಲರನ್ನೂ ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಿಯೇ ಒಳ ಬಿಡಲಾಗುತ್ತಿತ್ತು.

Facebook Comments

Sri Raghav

Admin