ಆಂಧ್ರಪ್ರದೇಶದಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕನ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ANdhra-Pradesh-------041

ಅಮರಾವತಿ, ಆ.16-ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಿನ್ನೆ ಸಂಜೆ ಆಕಸ್ಮಿಕವಾಗಿ ತೆರೆದ ಬೋರ್‍ವೇಲ್‍ಗೆ ಬಿದ್ದ ಎರಡು ವರ್ಷದ ಬಾಲಕನೊಬ್ಬನನ್ನು 10 ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ(ಎನ್‍ಡಿಆರ್‍ಎಫ್) ಮತ್ತು ಇತರ ತಂಡಗಳು ಯಶಸ್ವಿಯಾಗಿವೆ.  ಬಾಲಕನನ್ನು ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಲಾಗಿದ್ದು, ಇಂದು ಸಂಜೆ ಡಿಸ್‍ಚಾರ್ಜ್ ಆಗಲಿದ್ದಾನೆ.

ಚಂದ್ರಶೇಖರ್ ಎಂಬ ಬಾಲಕ 22 ಅಡಿ ಆಳದ ತೆರೆದ ನೆಲ ಬಾವಿಯೊಳಗೆ ಬಿದ್ದ ನಂತರ ರಕ್ಷಣಾ ಪಡೆಗಳು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಅದೃಷ್ಟವಶಾತ್ ಬಾಲಕ ಪೂರ್ತಿ ಆಳಕ್ಕೆ ಬೀಳದೆ 15 ಅಡಿ ಮಧ್ಯದಲ್ಲಿ ಸಿಲುಕಿದ್ದ. 10 ಗಂಟೆ ಶ್ರಮಿಸಿದ ಎನ್‍ಡಿಆರ್‍ಎಫ್ ಮತ್ತು ಇತರ ತಂಡಗಳು ಇಂದು ಮುಂಜಾನೆ 2.30ರಲ್ಲಿ ಬಾಲಕನನ್ನು ಸುರಕ್ಷಿತವಾಗಿ ಹೊರೆಗೆ ಎಳೆದುಕೊಂಡರು. ಸಾವಿನಿಂದ ಬಾಲಕ ಗೆದ್ದು ಬಂದಾಗ ಅಲ್ಲಿ ನೆರೆದಿದ್ದ ಚಂದ್ರಶೇಖರ್‍ನ ಹೆತ್ತವರು, ಗ್ರಾಮಸ್ಥರು ಹಾಗೂ ರಕ್ಷಣಾ ಪಡೆಗಳ ಸಂತಸ ಮಾರ್ದನಿಸಿತು.

ಚಂದ್ರಶೇಖರ್ ರಕ್ಷಣೆಗಾಗಿ ಎನ್‍ಡಿಆರ್‍ಎಫ್‍ನ 40 ಕಾರ್ಯಕರ್ತರು ನೆಲಬಾವಿಗೆ ಸಮನಾಂತರವಾಗಿ 30 ಅಡಿ ಗುಂಡಿ ತೋಡಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Facebook Comments

Sri Raghav

Admin