ಕಾರ್ ಬೇಡ..ನಿವೇಶನ ನೀಡಿ ಸಚಿವರೇ..! ಹೀಗೆ ಕೇಳಿದ್ದು ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Rajeshwari--01

ವಿಜಯಪುರ, ಆ. 16- ಕಾರ್ ಬೇಡ…. ನಿವೇಶನ ನೀಡಿ ಸಚಿವರೇ ಎಂದು ಕೇಳಿದವರು ಬೇರ್ಯಾರೂ ಅಲ್ಲ …. ಇತ್ತೀಚೆಗೆ ಇಂಗ್ಲೆಂಡ್‍ನಲ್ಲಿ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್‍ನ ತಾರೆ ರಾಜೇಶ್ವರಿ ಗಾಯಕ್‍ವಾಡ್. ನಿನ್ನೆ ವಿಜಯಪುರದಲ್ಲಿ ಹಮ್ಮಿಕೊಂಡಿದ್ದ 71 ನೆ ಸ್ವಾತಂತ್ರ್ಯೋತ್ಸವ ದಿನಾಚರಣೆಯ ವೇಳೆ ಸಚಿವ ಎಂ.ಬಿ.ಪಾಟೀಲ್ ಅವರು ರಾಜೇಶ್ವರಿ ಗಾಯಕ್‍ವಾಡ್ ಅವರ ಸಾಧನೆಯನ್ನು ಮೆಚ್ಚಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದರು.
ಆಗ ಪ್ರತಿಕ್ರಿಯಿಸಿದ ರಾಜೇಶ್ವರಿ ನನಗೆ ಕಾರು , ನಗದು ಮುಖ್ಯವಲ್ಲ ನೆಲೆಗೊಳ್ಳಲು ಸೂರು ಕಲ್ಪಿಸಿಕೊಡಿ ಎಂದು ಕೇಳಿಕೊಂಡರು. ನನ್ನ ಮನೆಯಲ್ಲಿ ಒಬ್ಬ ತಾಯಿ, ತಂಗಿ ಹಾಗೂ ತಮ್ಮಂದಿರು ವಾಸಿಸುತ್ತಿದ್ದು ನಮಗೆ ನಿಲ್ಲಲು ಸೂರಿಲ್ಲ ಈಗಿರುವ ಮನೆಯೂ ಶೀಥಿಲಗೊಂಡಿದ್ದು ಯಾವಾಗ ಬೀಳುತ್ತಲೋ ಎಂಬ ಭಯ ಕಾಡುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.

ರಾಜೇಶ್ವರಿಯ ಈ ಬೇಡಿಕೆಯ ಸ್ಪಂದಿಸಿದ ಸಚಿವ ಎಂ.ಬಿ.ಪಾಟೀಲ್ ಅವರು ಆದಷ್ಟು ಬೇಗ ಸೂರು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು.
ಇದೇ ವೇಳೆ ರಾಜೇಶ್ವರಿಗೆ ಸಚಿವರು ಆಟೋ ಗೇರ್ ಸ್ಕೂಟರ್ ಅನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹಿರಿಮೆಯನ್ನು ಮೆರೆಯುತ್ತಿರುವ ರಾಜೇಶ್ವರಿ ಅವರ ಸಾಧನೆಯನ್ನು ಕೊಂಡಾಡಿದ್ದಲ್ಲದೆ ಮುಂದಿನ ಜೀವನದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದರು.

Facebook Comments

Sri Raghav

Admin