ಗಡಿಯಲ್ಲಿ ಮತ್ತೆ ಪಾಪಿ ಪಾಕ್’ನಿಂದ ಕ್ಯಾತೆ, ಮುಂದುವರಿದ ಶೆಲ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಜಮ್ಮು, ಆ.16-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನದ ಕ್ಯಾತೆ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಮುಂಚೂಣಿ ನೆಲೆಗಳು ಮತ್ತು ನಾಗರಿಕರ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ಮತ್ತೆ ಗುಂಡು ಮತ್ತು ಶೇಲ್ ದಾಳಿ ನಡೆಸಿದ್ದಾರೆ. ಈ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿವೆ.
ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇಂದು ಮುಂಜಾನೆ 5.34ರಲ್ಲಿ ಸಣ್ಣ ಶಸ್ತ್ರಾಸ್ತ್ರಗಳು, ಸ್ವಯಂಚಾಲಿತ ಬಂದೂಕುಗಳು ಮತ್ತು ಮಾರ್ಟರ್‍ಗಳಿಂದ ಪಾಕಿಸ್ತಾನಿ ಸೇನೆ ಅಪ್ರಚೋದಿತ ಮತ್ತು ಮನಸೋಇಚ್ಛೆ ದಾಳಿ ನಡೆಸಿತು. ಇದರಿಂದಾಗಿ ಭಾರತೀಯ ಯೋಧರು ಪ್ರಬಲವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದರು ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

ಪೂಂಚ್‍ನ ಮಾನ್‍ಕೋಟ್ ಉಪ-ವಲಯದಲ್ಲೂ ಪಾಕ್ ಯೋಧರು ಗುಂಡು ಮತ್ತು ಶೆಲ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿವೆ. ಪಾಕಿ ಸೈನಿಕರು ಆ.13ರಂದು ಕೃಷ್ಣಘಾಟಿ, ನೌಶೇರಾ, ಮಾನ್‍ಕೋಟ್ ಮತ್ತು ಉತ್ತರ ಕಾಶ್ಮೀರದಲ್ಲಿ ಯುದ್ಧ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ತೀವ್ರ ಗಾಯಗೊಂಡಿದ್ದರು.

Facebook Comments

Sri Raghav

Admin