ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Karunanidhi

ಚೆನ್ನೈ, ಆ.16-ಡಿಎಂಕೆ ಅಧ್ಯಕ್ಷ ಡಾ. ಮುತ್ತುವೇಲು ಕರುಣಾನಿಧಿ ಅವರು ಅಸ್ವಸ್ಥರಾಗಿದ್ದು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. 93 ವರ್ಷದ ಕರುಣಾನೀಧಿ ಕಳೆದ ವರ್ಷದಿಂದ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಚೆನ್ನೈನ ಗೋಪಾಲಪುರಂ ಆಸ್ಪತ್ರೆಯಲ್ಲಿ ಅವರಿಗೆ ಶುಶ್ರೂಷೆ ನೀಡಲಾಗುತ್ತಿದೆ.
ಕಾವೇರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಅವರಿಗೆ ಲಘು ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ಅವರನ್ನು ಪಿಇಜಿ (ಪರ್‍ಕುಟನಿಯಸ್ ಎಂಡೋಸ್ಕೋಪಿ ಗ್ಯಾಸ್ಟ್ರೋನಮಿ) ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಅರವಿಂದನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin