ಡಿ.ಕೆ. ಸುರೇಶ್’ಗೆ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ, ಪೊಲೀಸರಿಗೆ ಮತ್ತೆ ತಲೆನೋವು

ಈ ಸುದ್ದಿಯನ್ನು ಶೇರ್ ಮಾಡಿ

Ravi-Poojary--012

ಬೆಂಗಳೂರು, ಆ.16-ರಾಜ್ಯದ ಭೂಗತಲೋಕದಲ್ಲಿ ಈಗ ಸುದ್ದಿಯಲ್ಲಿರುವ ಕುಪ್ರಸಿದ್ಧ ಪಾತಕಿ ಎಂದರೆ ರವಿ ಪೂಜಾರಿ ಅಲಿಯಾಸ್ ಪೂಜಾರಿ. ಕಾಂಗ್ರೆಸ್‍ನ ಪ್ರಭಾವಿ ನಾಯಕ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಸಹೋದರ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಕಚೇರಿಗೆ ಫೋನ್ ಮಾಡಿ ಹಣ ವಸೂಲಿಗಾಗಿ ಬೆದರಿಕೆ ಹಾಕಿ ಪೊಲೀಸರಿಗೆ ಮತ್ತೆ ತಲೆನೋವು ತಂದಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಎಚ್.ಎಂ. ರೇವಣ್ಣನವರಿಗೆ 10 ಕೋಟಿ ರೂ.ಗಳ ಹಫ್ತಾ ವಸೂಲಿಗಾಗಿ ಖೂನಿ ಬೆದರಿಕೆ ಹಾಕಿದ್ದ ಪೂಜಾರಿ ಮತ್ತೆ ಬಾಲ ಬಿಚ್ಚಿದ್ದಾನೆ.

ಬೆಂಗಳೂರು ಭೂಗತಲೋಕದಲ್ಲಿ ಈ ಹೆಸರು ಕಳೆದ ಹತ್ತಾರು ವರ್ಷಗಳಿಂದ ಪೊಲೀಸರು ಸೇರಿದಂತೆ ಅಂಡರ್‍ವಲ್ರ್ಡ್ ಡಾನ್‍ಗಳ ನಿದ್ದೆ ಕೆಡಿಸಿದೆ. ರವಿ ಪೂಜಾರಿಯನ್ನು ಯಾರೊಬ್ಬರೂ ಇದುವರೆಗೂ ನೇರವಾಗಿ ನೋಡೇ ಇಲ್ಲ ಎಂಬುದು ವಿಶೇಷ. ಮಂತ್ರಿ ಡೆವಲಪರ್ಸ್ ಸಂಸ್ಥೆಯ ಮುಖ್ಯ ಕಚೇರಿ ಮಂತ್ರಿ ಹೌಸ್ ಮೇಲೆ ಕೆಲವು ವರ್ಷಗಳ ಹಿಂದೆ ರವಿ ಪೂಜಾರಿ ಗುಂಡಿನ ದಾಳಿ ನಡೆಸಿದ. ನಂತರ ಕುಖ್ಯಾತನಾದ. 2009ರಲ್ಲಿ ಗುರಪ್ಪನ ಪಾಳ್ಯದ ಶೋಭಾ ಡೆವಲಪರ್ಸ್ ಮೇಲೆ ದಾಳಿಯಾದಾಗ ಕೂಡ ಇವನ ಹೆಸರು ಕೇಳಿಬಂದಿತ್ತು. ಮಾಜಿ ಸಚಿವ ರೇವಣ್ಣ ಅವರಿಗೆ ಧಮಕಿ ಹಾಕಿ ಆತನ ಪುತ್ರನ ಸಿನಿಮಾ ಬಿಡುಗಡೆ ಆಗಬೇಕಾದರೆ 10 ಕೋಟಿ ಹಫ್ತಾ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ. ಬೆಂಗಳೂರು ಮಾತ್ರವಲ್ಲದೆ ಮಂಗಳೂರಿನಲ್ಲೂ ಯಾವ ಕುಕೃತ್ಯ ನಡೆದರೂ ಅಲ್ಲಿ ರವಿ ಪೂಜಾರಿಯ ನೆರಳು ಇರುತ್ತದೆ.

ಪೂಜಾರಿ ನೆಲೆ ಯಾವುದು..?

ನಟೋರಿಯಸ್ ರೌಡಿ ರವಿ ಪೂಜಾರಿಯ ಸುತ್ತ ಕೆಲವು ವರ್ಷಗಳಿಂದ ಅನೇಕ ವದಂತಿಗಳು ಹಬ್ಬಿವೆ. ಈ ಪಾತಕಿ ಎಲ್ಲಿಯವನು ಎಂಬುದು ಕೂಡ ಗೊತ್ತಿಲ್ಲ. ಅಷ್ಟರಮಟ್ಟಿಗೆ ತನ್ನ ಐಡೆಂಟಿಟಿಯನ್ನು ರಹಸ್ಯವಾಗಿ ಕಾಪಾಡಿಕೊಂಡು ಬಂದಿದ್ದಾನೆ. ಈತ ಬೆಂಗಳೂರು ಅಥವಾ ಮಂಗಳೂರಿನಲ್ಲಿದ್ದಾನೆ ಎಂದು ಕೆಲವರು ಹೇಳುತ್ತಾರೆ. ಮುಂಬೈನಿಂದ ಆಪರೇಟ್ ಮಾಡುತ್ತಾನೆ ಎಂದು ಕೆಲವರು ಕೆಲವರು ತಿಳಿಸುತ್ತಾರೆ. ಮತ್ತೊಬ್ಬರು ಅತ ದುಬೈನಲ್ಲಿದ್ದುಕೊಂಡು ಅಲ್ಲಿಂದಲೇ ಕಂಟ್ರೋಲ್ ಮಾಡುತ್ತಾನೆ ಎನ್ನುತ್ತಾರೆ.

ಅತ್ಯಂತ ಅಪಾಯಕಾರಿ ಮತ್ತು ಚಾಲಾಕಿ ರೌಡಿಯಾದ ರವಿ ಪೂಜಾರಿ ಮುಂಬೈನಲ್ಲಿರಬೇಕೆಂದು ತಿಳಿದು ಕೆಲವು ವರ್ಷಗಳ ಹಿಂದೆ ಆತನ ಜಾಡು ಹುಡುಕಿಕೊಂಡು ಹೋದ ಪೊಲೀಸರಿಗೆ ಒಂದು ಪೊೀಟೊ ಸಿಕ್ಕಿದೆ. ಅದನ್ನೇ ರವಿ ಪೂಜಾರಿ ಎಂದು ನಂಬಿದ್ದಾರೆ. ಹಲವಾರು ವರ್ಷಗಳಿಂದ ರವಿ ಪೂಜಾರಿ ಸುದ್ದಿ ಪ್ರಕಟವಾದಾಗಲೆಲ್ಲ ಅದೇ ಹಳೇ ಫೋಟೋ ಪುನರಾವರ್ತನೆಯಾಗುತ್ತಿದೆ. ಪೊಲೀಸರಿಗೆ ಲಭಿಸಿರುವ ಈ ಫೋಟೊದಲ್ಲಿರುವ ವ್ಯಕ್ತಿ ಕೂಡ ಯಾರ ಕಣ್ಣಿಗೂ ಈವರೆಗೆ ಗೋಚರಿಸಿಲ್ಲ. ಎಂದೋ ಲಭಿಸಿರುವ ಫೋಟೋದಲ್ಲಿರುವ ವ್ಯಕ್ತಿಯೇ ರವಿ ಪೂಜಾರಿ ಎಂದು ಎಲ್ಲರೂ ನಂಬಿದ್ದಾರೆ. ಅಷ್ಟಕ್ಕೂ ರವಿ ಪೂಜಾರಿಯನ್ನು ಕಣ್ಣಾರೆ ಕಂಡವರು ಯಾರೂ ಇಲ್ಲ.

ಕೆಲವು ಪೊಲೀಸ್ ಆಧಿಕಾರಿಗಳು ಹೇಳುವಂತೆ ರವಿ ಪೂಜಾರಿ ಉಡುಪಿ ಮೂಲದವನಂತೆ. ಆದರೆ ಅಲ್ಲೂ ಆತನ ಸಂಬಂಧಿಕರು ಯಾರೂ ಇಲ್ಲ. ಅಕ್ಷರಶ: ಭೂಗತವಾಗಿರುವ ಪೂಜಾರಿ ಹೆಸರು ಹೇಳಿಕೊಂಡು ಪುಡಿ ಮತ್ತು ಮರಿ ರೌಡಿಗಳು ಸಹ ಹಫ್ತಾ ವಸೂಲಿ ದಂಧೆಗೆ ಇಳಿದಿದ್ದಾರೆ.  ತಂತ್ರಜಾ್ಞನ ಇಷ್ಟೊಂದು ಮುಂದುವರಿದ್ದಿದ್ದರೂ ಫೋನ್ ಕರೆ ಜಾಡು ಹಿಡಿದು ರವಿ ಪೂಜಾರಿಯನ್ನು ಸೆರೆ ಹಿಡಿಯಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೂ ಈ ಸನ್ನಿವೇಶದಲ್ಲಿ ಉದ್ಭವಿಸದೇ ಇರದು. ಪೂಜಾರಿಯ ಫೋನ್ ಕರೆಯ ಜಾಡು ಹಿಡಿದು ಆತನನ್ನು ಪತ್ತೆ ಮಾಡಲು ತೊಡಕಾಗಿರುವುದು ಆತ ಬಳಸುತ್ತಿರುವ ಕಾಲಿಂಗ್ ಕಾರ್ಡ್‍ನಿಂದ. ಏನಿದು ಕಾಲಿಂಗ್ ಕಾರ್ಡ್ ? ಕೆಲವು ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾದಲ್ಲಿ ಅಪರಾಧ ಕೃತ್ಯ ಎಸಗುವವರು ಕಂಪ್ಯೂಟರ್ ಮೂಲಕ ಕಾಲಿಂಗ್ ಕಾಡ್ ಬಳಸಿ ಮಾತನಾಡಿದರೂ ಆ ಸಂಖ್ಯೆ ಗೊತ್ತಾಗುವುದಿಲ್ಲ. ಈ ರವಿ ಪೂಜಾರಿ ಇದೇ ಕಾಲಿಂಗ್ ಕಾರ್ಡ್ ಬಳಸುತ್ತಿದ್ದಾನಂತೆ. ಇದೇ ಕಾಲಿಂಗ್ ಕಾರ್ಡ್‍ನನ್ನು ರವಿ ಪೂಜಾರಿ ತನ್ನ ಅಪರಾಧ ಚಟುವಟಿಕೆಗಳ ಜೊತೆಗೆ ಬಳಸುತ್ತಾ ತುಂಬಾ ಅಪ್‍ಡೇಟ್ ಆಗಿದ್ದಾನಂತೆ.

ಎಲ್ಲೋ ಒಂದು ಕಡೆ ಇದ್ದುಕೊಂಡು, ತನಗೆ ಕುಖ್ಯಾತಿ ಬರುವಂತೆ ಮಾಡಿಕೊಂಡು ಬೆಂಗಳೂರಿನ ಪಾತಕ ಲೋಕವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ರವಿಪೂಜಾರಿ ಸ್ಕೆಚ್ ಹಾಕುತ್ತಿದ್ದಾನೆಯೇ ಎಂಬುದು ಅಸ್ಪಷ್ಟವಾಗಿದೆ.  ಪ್ರಸ್ತುತ ಸಂಸದ ಡಿ.ಕೆ.ಸುರೇಶ್ ಅವರಿಗೆ ಬೆದರಿಕೆ ಕರೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಮುಂದೆ ಪೊಲೀಸರು ಇದನ್ನು ಹೇಗೆ ಹ್ಯಾಂಡ್ಲ್ ಮಾಡುತ್ತಾರೆ ಎಂಬುದನ್ನು ನೋಡಬೇಕು.

Facebook Comments

Sri Raghav

Admin