ಪಳನಿಸ್ವಾಮಿ ವಿರುದ್ಧ ಮತ್ತೆ ಗುಡುಗಿದ ಕಮಲ್ : ರಾಜೀನಾಮೆಗೆ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Kamal-Hassan--01

ಚೆನ್ನೈ, ಆ.16-ರಾಜಕೀಯ ಪ್ರವೇಶ ಘೋಷಣೆ ಮೂಲಕ ಈಗಾಗಲೇ ಸಂಚಲನ ಸೃಷ್ಟಿಸಿರುವ ಖ್ಯಾತ ನಟ ಕಮಲ್‍ಹಾಸನ್ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಭಾರೀ ಭ್ರಷ್ಟಾಚಾರ ಮತ್ತು ಅವ್ಯವಹಾರಗಳಲ್ಲಿ ತೊಡಗಿರುವ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.  ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟರ್‍ಗಳ ಮೂಲಕ ಟೀಕಾಸ್ತ್ರಗಳನ್ನು ಪ್ರಯೋಗಿಸಿರುವ ಕಮಲ್, ಭ್ರಷ್ಟಾಚಾರದ ವಿರುದ್ಧ ಹೊಸ ಹೋರಾಟ ನಡೆಸಲು ಹಾಗೂ ದುರಾಡಳಿತದ ವಿರುದ್ಧ ಸೊಲ್ಲೆತ್ತಲು ಧೈರ್ಯವಿರುವ ಜನರು ಮುಂದೆ ಬರುವಂತೆ ಕರೆ ನೀಡಿದ್ದಾರೆ.

ತಮಿಳುನಾಡು ಸರ್ಕಾರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಇದ್ದವರು ಅದನ್ನು ಗಮನಕ್ಕೆ ತಂದು ಹೋರಾಟ ನಡೆಸುವಂತೆ ಈ ಹಿಂದೆ ವಿಶ್ವರೂಪಂ ನಟ ಹೇಳಿದ್ದರು.

Facebook Comments

Sri Raghav

Admin