ಬಾಂಗ್ಲಾದಲ್ಲಿ ಭೀಕರ ಪ್ರವಾಹಕ್ಕೆ 35 ಜನರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Flood--01

ಢಾಕಾ, ಆ.16-ಸತತ ಮಳೆಯಿಂದಾಗಿ ಬಾಂಗ್ಲಾದೇಶದ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹದಲ್ಲಿ ತತ್ತರಿಸಿದ್ದು, 35ಕ್ಕೂ ಹೆಚ್ಚು ಮಂದಿ ಬಲಿಯಾಗಿ, ಕೆಲವರು ನಾಪತ್ತೆಯಾಗಿದ್ದಾರೆ. ನೆರೆ ಹಾವಳಿಯಿಂದ ಆರು ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಬಾಂಗ್ಲಾದೇಶದ ನೆರೆಹೊರೆ ದೇಶಗಳಾದ ಭಾರತ, ಚೀನಾ, ನೇಪಾಳ ಮತ್ತು ಭೂತಾನ್‍ನ ಗಡಿ ಪ್ರಾಂತ್ಯಗಳಲ್ಲೂ ಭೀಕರ ಪ್ರವಾಹ ತಲೆದೋರಿರುವ ಕಾರಣ ಬಾಂಗ್ಲಾದಲ್ಲೂ ನೆರೆ ಹಾವಳಿ ಅಪಾಯ ಮಟ್ಟ ತಲುಪಿದೆ ಎಂದು ವಿಪತ್ತು ನಿರ್ವಹಣಾ ಸಚಿವ ಮೊಘಲ್ ಹುಸೇನ್ ಚೌಧರಿ ತಿಳಿಸಿದ್ದಾರೆ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ 60,000ಕ್ಕೂ ಹೆಚ್ಚು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭೀಕರ ನೆರೆಯಿಂದ 3,68,586 ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin