ಬಿಹಾರದಲ್ಲಿ ಪ್ರವಾಹದ ರೌದ್ರಾವತಾರಕ್ಕೆ 60 ಸಾವು, 69.81 ಲಕ್ಷ ಜನ ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Bihar-------01

ಪಾಟ್ನಾ, ಆ.16-ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಎಡಬಿಡದ ಮಳೆ ಮತ್ತು ನೆರೆ ಆವಾಂತರಗಳಿಗೆ ಸಂಬಂಧಪಟ್ಟ ದುರಂತಗಳಲ್ಲಿ ಈವರೆಗೆ 60ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 13 ಜಿಲ್ಲೆಗಳು ಅಕ್ಷರಶ: ಜಲಪ್ರಳಯಕ್ಕೆ ತುತ್ತಾಗಿದ್ದು, 69.81 ಲಕ್ಷ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪ್ರವಾಹದ ಭೋರ್ಗರೆತಕ್ಕೆ ಸಾವಿರಾರು ಗುಡಿಸಲುಗಳು ಕೊಚ್ಚಿಕೊಂಡು ಹೋಗಿದ್ದು, ಅನೇಕ ಮನೆಗಳು, ರಸ್ತೆಗಳು, ಸೇತುವೆಗಳು ತೀವ್ರ ಹಾನಿಗೀಡಾಗಿವೆ. ಫಸಲಿಗೆ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಗೆ ತೀವ್ರ ಹಾನಿಯಾಗಿವೆ.

ಅರಾರಿಯಾ, ಪಶ್ಚಿಮ ಚಂಪಾರಣ್, ಕಿಸನ್‍ಗಂಜ್, ಸೀತಾಮರಿ, ಮಾಧೇಪುರ, ಪೂರ್ವ ಚಂಪಾರಣ್, ದರ್ಭಾಂಗ, ಮಧುಬನಿ ಮತ್ತು ಶೇಯೊಹಾರ್ ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಅಲ್ಲಿನ ಜನರ ಬದುಕು ಮುರಾಬಟ್ಟೆಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಎರಡನೇ ಬಾರಿ ವೈಮಾನಿಕ ಸಮೀಕ್ಷೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸದ್ದಾರೆ.

Facebook Comments

Sri Raghav

Admin