ಬೆಂಗಳೂರಿಗರೇ ಹುಷಾರ್, ಇನ್ನೂ 2 ದಿಂದ ಕಾಡಲಿದ್ದಾನೆ ಮಳೆರಾಯ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Rian--021

ಬೆಂಗಳೂರು, ಆ.16-ರಾಜಧಾನಿ ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆ ನಿನ್ನೆ ಸ್ವಲ್ಪ ತಗ್ಗಿದ್ದು, ಇನ್ನೂ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಮೊನ್ನೆ 182 ಮಿಲಿಮೀಟರ್‍ವರೆಗೂ ಭಾರೀ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತ್ತು. ನಿನ್ನೆ ಕೂಡ ಉತ್ತಮ ಪ್ರಮಾಣದ ಮಳೆ ಬಿದ್ದ ವರದಿಯಾಗಿದೆ.  ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಲಘು ವಾಯುಭಾರ ಕುಸಿತದ ಪರಿಣಾಮದಿಂದ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇರೀತಿ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ.

ನಿನ್ನೆ ರಾತ್ರಿ ಕೂಡ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಸೇರಿದಂತೆ ಉತ್ತಮ ಮಳೆಯಾಗಿದೆ. ಮಳೆ ಮುಂದುವರೆಯುವ ಮುನ್ಸೂಚನೆಗಳಿದ್ದರೂ ಕೂಡ ಮೊನ್ನೆ ಬಿದ್ದಂತೆ ಅತ್ಯಧಿಕ ಪ್ರಮಾಣದ ಮಳೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಳೆ ವಿವರ ಮಿಲಿಮೀಟರ್‍ನಲ್ಲಿ: ಅಂಜನಾಪುರ 24, ಅಗ್ರಹಾರ ದಾಸರಹಳ್ಳಿ 40, ಬಿಳೇಕಹಳ್ಳಿ 30, ಉತ್ತರಹಳ್ಳಿ 30, ಕೋಣನಕುಂಟೆ 28, ಯಲಹಂಕ 29, ನಾಗಪುರ 30, ನಾಗರಬಾವಿ 35, ಹೆಮ್ಮಿಗೆಪುರ 36.5, ಜ್ಞಾನಭಾರತಿ 34.5, ಕೆಂಗೇರಿ 68, ಹೇರೋಹಳ್ಳಿ 38, ರಾಜರಾಜೇಶ್ವರಿನಗರ 45, ಕೊಟ್ಟಿಗೆಪಾಳ್ಯ 29.5, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 29, ತಾವರೆಕೆರೆ 26.5, ಕುಮಾರಸ್ವಾಮಿ ಲೇಔಟ್ 36.5, ಸಾರಕ್ಕಿ 37, ಹಂಪಿನಗರ 40, ವಿದ್ಯಾಪೀಠ 35.5, ವಿಶ್ವೇಶ್ವರ 31, ಎಚ್‍ಬಿಆರ್ ಲೇಔಟ್ 26, ಸಂಪಂಗಿರಾಮನಗರ 31.5, ಹೊರಮಾವು 35.5 ಮಿಲಿಮೀಟರ್‍ನಷ್ಟು ಮಳೆ ಬಿದ್ದ ವರದಿಯಾಗಿದೆ. ಉಳಿದಂತೆ ಸಾಧಾರಣ ಪ್ರಮಾಣದ ಮಳೆಯಾಗಿದೆ.

Facebook Comments

Sri Raghav

Admin