ಬ್ಲೂ ವೇಲ್ ಗೇಮ್‍ಗೆ ಕೇರಳದಲ್ಲಿ ಮೊದಲ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Game--01

ತಿರುವನಂತಪುರಂ, ಆ.16-ಅಮಾಯಕರನ್ನು ಬಲಿ ತೆಗೆದುಕೊಂಡು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ಬ್ಲೂ ವೇಲ್ ಆನ್‍ಲೈನ್ ಗೇಮ್ ವಿರುದ್ಧ ಜಾಗೃತಿ ಮುಂದುವರಿದಿರುವ ಸಂದರ್ಭದಲ್ಲಿ ಮತ್ತೊಬ್ಬ ಬಾಲಕನನ್ನು ನೀಲಿ ತಿಮಿಂಗಲ ಬಲಿ ತೆಗೆದುಕೊಂಡಿದೆ. ಕೇರಳ ರಾಜಧಾನಿ ತಿರುವನಂತಪುರಂನ ಪೆರುಂಕುಳಂನ 11ನೇ ತರಗತಿ ವಿದ್ಯಾರ್ಥಿ ಮನೋಜ್(16) ತನ್ನ ಮನೆಯಲ್ಲಿ ಜುಲೈ 26ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ವಿಲಿಪ್ಪಿಲ್‍ಶಾಲಾ ಠಾಣೆ ಪೊಲೀಸರು ಅಸಹಜ ಸಾವು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ, ನಿನ್ನೆ ಬಾಲಕನ ತಾಯಿ ಅನು, ತನ್ನ ಮಗ ಬ್ಲೂ ವೇಲ್ ಚಾಲೆಂಜ್ ಗೇಮ್‍ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಆರೋಪ ಸಾಬೀತಾದರೆ ಬ್ಲೂ ವೇಲ್ ಚಾಲೆಂಜ್ ಗೇಮ್‍ಗೆ ಕೇರಳದ ಮೊದಲ ಬಲಿ ಇದಾಗಲಿದೆ.

ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುವ ಈ ಗೇಮ್ ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಅಪಾಯಕಾರಿ ಟಾಸ್ಕ್ ನೀಡುವ ಈ ಗೇಮ್ ಬಾಲಕರು ಸ್ವಯಂ ಹಾನಿ ಅಥವಾ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಈ ಗೇಮ್ 50 ಮಾರಕ ಸವಾಲುಗಳನ್ನು ಹೊಂದಿದೆ. ರಷ್ಯಾ ಮತ್ತು ಯರೋಪ್ ದೇಶಗಳಲ್ಲಿ ಈಗಾಗಲೇ ಬ್ಲೂ ವೇಲ್ 150ಕ್ಕೂ ಹೆಚ್ಚು ಜನರನ್ನು ಆಪೋಶನ ತೆಗೆದುಕೊಂಡಿದೆ.

Facebook Comments

Sri Raghav

Admin