ಭಾರತ-ಚೀನಾ ಬಿಕ್ಕಟ್ಟು ಕುರಿತು ನೇರ ಮಾತುಕತೆಗೆ ಅಮೆರಿಕ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

India-vs-China--01

ವಾಷಿಂಗ್ಟನ್, ಆ.16-ಭಾರತ ಮತ್ತು ಚೀನಾ ನಡುವೆ ಈಶಾನ್ಯ ರಾಜ್ಯದ ಸಿಕ್ಕಿಂನ ಡೋಕ್ಲಾಮ್ ವಲಯದಲ್ಲಿ ಸಂಘರ್ಷ ತಾರಕಕ್ಕೇರಿರುವಾಗಲೇ, ಲಡಾಕ್‍ನ ಪ್ರದೇಶದಲ್ಲಿ ಚೀನಿ ಯೋಧರ ಅತಿಕ್ರಮಣದ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿವಾದಗಳನ್ನು ನೇರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ವಾಷಿಂಗ್ಟನ್ ಸಲಹೆ ಮಾಡಿದೆ.

ಲಡಕ್‍ನ ಪ್ರಸಿದ್ಧ ಪಾನ್‍ಗೊಂಗ್ ಸರೋವರದ ದಂಡೆಯುದ್ದಕ್ಕೂ ಇರುವ ಭಾರತೀಯ ಪ್ರಾಂತ್ಯದೊಳಗೆ ನುಸುಳಲು ಚೀನಾ ಯೋಧರು ನಡೆಸಿದ ಯತ್ನವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿದ ನಂತರ ಅಮೆರಿಕ ಈ ಹೇಳಿಕೆ ನೀಡಿದೆ. ಭಾರತ ಮತ್ತು ಚೀನಾ ಒಟ್ಟಿಗೆ ಕುಳಿತು ನೇರ ಮಾತುಕತೆ ಮೂಲಕ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನೌವರ್ಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin